ಕಲಬುರಗಿ | ಆದಿ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿಗೆ ಪೂರ್ವಭಾವಿ ಸಭೆ
ಕಲಬುರಗಿ : ಆದಿ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಪೂರ್ವಭಾವಿ ಸಭೆ ಆಳಂದ ಪ್ರವಾಸಿ ಮಂದಿರದಲ್ಲಿ ಶಿವಕುಮಾರ ಚಿಂಚೋಳಿ ದೇವಂತಗಿ ನೇತೃತ್ವದಲ್ಲಿ ನಡೆಯಿತು.
ಸಭೆ ಉದ್ದೇಶಿಸಿ ಆದಿ ಬಣಜಿಗ ಸಮಾಜದ ಅಧ್ಯಕ್ಷರಾದ ಶ್ರೀಮಂತ ರಾವ ಗೋದೆ ಮಾತನಾಡಿ, ಆದಿ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕಾದರೆ ಹೆಚ್ಚಿನ ಜನಸಂಖ್ಯೆಯಲ್ಲಿ ಬೆಳಗಾವಿಯಲ್ಲಿ ಡಿ.19 ರಂದು ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಸಮುದಾಯದ ಮುಖಂಡ ನಾಗರಾಜ ಶೇಖಜೀ ದಂಗಾಪುರ ಮಾತನಾಡಿ, ಆದಿ ಬಣಜಿಗ ಸಮಾಜ ಒಗ್ಗಟ್ಟಿನಿಂದ ಕೂಡಿ ಹೋರಾಟ ಮಾಡಿದಾಗ ಮಾತ್ರ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ರಾಜಕೀಯ ಪ್ರಾತಿನಿಧ್ಯ ಸಿಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾವಳಗಿ, ಬಸವರಾಜ ಬಿರಾದಾರ್, ಆದಿಪಣಜಿಗ ಸಮಾಜದ ಮುಖಂಡರಾದ ಶಿವಕುಮಾರ ಚಿಂಚೋಳಿ ದೇವಂತಗಿ, ಶಾಂತಮಲ್ಲ ಚಿಂಚೋಳಿ, ಸಿದ್ದಲಿಂಗ ಚಿತಲಿ, ಸುಭಾಷ ಚಿತಲಿ, ಸಿದ್ದರಾಮ್ ಬಸ್ತೆ, ಶರಣು ಬೆಳಮ, ಶಿವಾನಂದ ಚಿಕ್ಕಳ್ಳಿ, ಬಸವರಾಜ ವಾಡಿ, ಶಿವಕುಮಾರ ವಾಡಿ, ಲಕ್ಷ್ಮೀಪುತ್ರ ಕವಲಗಾ, ಶರಣು ಕುಮಾರ ದೇವಂತಗಿ, ಶಿವಾನಂದ ಪಾಟೀಲ, ಹನುಮಂತ ನಗದೆ, ಬಸವರಾಜ ನಗದೆ, ಮಲ್ಲಿಕಾರ್ಜುನ ಬೆಳಮಗಿ, ಬಂಡೆಪ್ಪ ಸರ್ಸಂಬಿ ನಾಗೇಂದ್ರ ಮುಲಗೆ ಚಿದಾನಂದ ಹಿಮಾಜಿ ಶಿವಬಸವ ಶಿವ ಕಿರಣ ಪಡಸಾವಳಿ ಹಲವಾರು ಮುಖಂಡರು ಉಪಸ್ಥಿತರಿದ್ದರು.