ಕಲಬುರಗಿ | ಕಾರಾಗೃಹದಲ್ಲಿ ಗುಣಮಟ್ಟದ ಆಹಾರಕ್ಕೆ ಒತ್ತಾಯಿಸಿ ಕೈದಿಗಳಿಂದ ಧರಣಿ
ಕಲಬುರಗಿ : ಕೇಂದ್ರ ಕಾರಾಗೃಹದಲ್ಲಿ ಗುಣಮಟ್ಟ ಆಹಾರ ನೀಡುವಂತೆ ಮತ್ತು ಹಿರಿಯ ಅಧಿಕಾರಿಗಳು ಜೈಲಿಗೆ ಭೇಟಿ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ಬೆಳಿಗ್ಗೆಯಿಂದ ಉಪಹಾರ ಸೇವಿಸದೇ ಕೈದಿಗಳು ಧರಣಿ ನಡೆಸುತ್ತಿದ್ದಾರೆ.
ಕೈದಿಗಳು ಗುಣಮಟ್ಟದ ಆಹಾರ ಮತ್ತು ಕಾರಾಗೃಹಕ್ಕೆ ಎಡಿಜಿಪಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಭೇಟಿ ನೀಡಬೇಕೆಂದು ಆಗ್ರಹಿಸಿ ಕೈದಿಗಳು ಜೈಲಿನಲ್ಲಿ ಘೋಷಣೆಗೆ ಕೂಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ ಉಪಹಾರ ಸೇವಿಸಿ ಗುಟ್ಖಾ ಬೇಕು, ಸಿಗರೇಟು ಬೇಕು ಎಂದು ಕೈದಿಗಳು ಧರಣಿ ನಡೆಸುತ್ತಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೈಲರ್ ವಿರುದ್ಧ ಆರೋಪ ಮತ್ತು ಕಾರಾಗೃಹದಲ್ಲಿ ಗುಣಮಟ್ಟದ ಆಹಾರ ಹಾಗೂ ಕೈದಿಗಳಿಂದ ನಡೆಯುತ್ತಿರುವ ಧರಣಿ ಕುರಿತು ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಕಾರಾಗೃಹದ ಅಧೀಕ್ಷಕರು ಮತ್ತು ಕಾರು ಚಾಲಕ ಕೈದಿಯೋರ್ವನಿಗೆ ಹಿಂಸೆ ನೀಡಿ ಹಣದ ಬೇಡಿಕೆ ಮಾಡಿರುವ ಆರೋಪ ಬೆನ್ನಲ್ಲೇ ಮಂಗಳವಾರ ಮತ್ತೊಂದು ಘಟನೆಗೆ ಕಾರಾಗೃಹ ಸಾಕ್ಷಿಯಾಗಿದೆ.
ನಾನು ಪರೇಡ್ ನಲ್ಲಿ ಇದ್ದು, ಜೈಲಿನ ನೆಡೆಯುತ್ತಿರುವ ಘಟನೆಯ ಬಗ್ಗೆ ಮಾಹಿತಿ ಪಡೆಯುವೆ.
-ಶರಣಪ್ಪ ಎಸ್.ಡಿ, ಪೊಲೀಸ್ ಆಯುಕ್ತರು ಕಲಬುರಗಿ