ಕಲಬುರಗಿ | ಹೆಗಡೆಯವರ ಗಣತಿಯಲ್ಲಿ ಗಾಣಿಗ ಸಮುದಾಯಕ್ಕೆ ಅನ್ಯಾಯ ಆರೋಪ : ಪ್ರತಿಭಟನೆ

ಕಲಬುರಗಿ : 10 ವರ್ಷಗಳ ಹಿಂದೆ ತಯಾರಿಸಿದ ಹಿಂದುಳಿದ ಆಯೋಗದ ಜಾತಿ ಗಣತಿ ವರದಿಯನ್ನು ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಇತ್ತೀಚೆಗೆ ಸಲ್ಲಿಸಿದ್ದ ವರದಿಯಲ್ಲಿ ಗಾಣಿಗ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ. ಅದನ್ನ ಸರಿಪಡಿಸಬೇಕೆಂದು ಗುಲಬರ್ಗಾ ಡಿಸ್ಟ್ರಿಕ್ಟ್ ಹಿಂದೂ ಗಾಣಿಗ ಸಂಘ ಆರೋಪಿಸಿದೆ.
ಈ ಕುರಿತು ಹಿಂದೂ ಗಾಣಿಗ ಸಂಘದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರಕಾರಕ್ಕೆ ಸಲ್ಲಿಸಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಗಾಣಿಗ ಸಮುದಾಯದ ಜನಸಂಖ್ಯೆ ಕೇವಲ 7 ಲಕ್ಷವೆಂದು ಉಲ್ಲೇಖಿಸಿದ್ದಾರೆ, ಅದೆ ರೀತಿ ಲಿಂಗಾಯತ ಗಾಣಿಗ ಎಂದು ಕೇವಲ 23 ಸಾವಿರ ಜನಸಂಖ್ಯೆ ನಮೂದಿಸಿದ್ದು, ಇದು ಸತ್ಯಕ್ಕೆ ದೂರುವಾಗಿರುತ್ತದೆ. ಹುಬ್ಬಳ್ಳಿ ಅಖಿಲ ಭಾರತ ಗಾಣಿಗ ಸಮಾಜವು ರಾಜ್ಯ ಪ್ರವಾಸ ಮಾಡಿ ಗಾಣಿಗ ಸಮಾಜದ ಅನೇಕ ಒಳಪಂಗಡವು ಈ ಸಮಾಜದಲ್ಲಿವೆ ಆರೋಪಿಸಿದ್ದಾರೆ.
ಕರಿಕುಲ ಗಾಣಿಗ, ಸಜ್ಜನ ಗಾಣಿಗ, ಪಂಚಮ ಗಾಣಿಗ, ಕಲಶೆಟ್ಟಿ ಗಾಣಿಗ, ಜ್ಯೋತಿ ಗಾಣಿಗ, ತೇಲಿಗಾಣಿಗ, ಶಿವಜ್ಯೋತಿ ಗಾಣಿಗ, ನಗರವೈಶ್ಯ ಗಾಣಿಗ, ದೇವ ಗಾಣಿಗ, ಶೆಟ್ಟಿ ಗಾಣಿಗ ಎಂಬ ಇತ್ಯಾದಿ 13 ಒಳಪಂಗಡವು ಕರ್ನಾಟಕ ರಾಜ್ಯದಲ್ಲಿವೆ. ಹಾಗಾಗಿ ನಮ್ಮ ಜನಸಂಖ್ಯೆ ರಾಜ್ಯದಲ್ಲಿ ಕನಿಷ್ಟ 45 ಲಕ್ಷಕ್ಕೂ ಅಧಿಕವಿದೆ. ಈಗ ಸಲ್ಲಿಸಿರುವ ಜಾತಿಗಣತಿ ವರದಿಯಲ್ಲಿ ನಮ್ಮ ಗಾಣಿಗ ಸಮಾಜದ ಜನಸಂಖ್ಯೆ ಅತೀ ಅಲ್ಪ ಸಂಖ್ಯೆ ತೋರಿಸಿದ್ದಾರೆ ಎಂದು ಪ್ರತಿಭಟನಕಾರರು ದೂರಿದ್ದಾರೆ.
ಗಾಣಿಗ ಸಮಾಜದ ರಾಜ್ಯದಲ್ಲಿ 45 ಲಕ್ಷಕ್ಕೂ ಮಿಗಿಲಾಗಿದ್ದು, ಈ ಅವೈಜ್ಞಾನಿಕ ಜಾತಿ ಗಣತಿ ವರದಿಯಲ್ಲಿ ನಮಗೆ ದೊಡ್ಡ ಅನ್ಯಾಯವಾಗಿದೆ, ಸಮಾಜಕ್ಕೆ 2 ಎ ಮಿಸಲಾತಿಯಲ್ಲಿ ಮುಂದುವರಿಸಿಕೊಂಡು ಹೋಗಿ ನಮ್ಮ ಸಮಾಜಕ್ಕೆ ನ್ಯಾಯ ಯುತವಾಗಿ ಸಿಗಬೇಕಾದ ಆರ್ಥಿಕ, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಾನಮಾನಗಳನ್ನು ನೀಡಬೇಕೆಂದು ಒತ್ತಡ ಹೇರಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣು ಬಿಲ್ಲಾಡ, ವೀರೇಶ್ ಕಲಶೆಟ್ಟಿ, ರೇವಣಸಿದ್ದಪ್ಪ ಸಂಕಾಲಿ, ಡಿಪಿ ಸಜ್ಜನ್, ನಿಜಗುಣಗೌಡ, ಶಿವ ಶರಣಪ್ಪ ಪರಪ್ಪಗೋಳ, ವಿಠಲ್ ಹೇರೂರು, ಸಂಗನಗೌಡ ಪಾಟೀಲ್, ಸಂದೀಪ್ ದೇಸಾಯಿ, ಬಸವರಾಜ್ ಗೌಡ ಕುಕುನೂರು, ಸಂಗನಗೌಡ ವಿ. ಪಾಟೀಲ್, ಅಶೋಕ್ ಗೌಡ ಪಾಟೀಲ್ ಅತನೂರ್, ಶಂಕರ್ ಗೌಡ ಪೊಲೀಸ್ ಪಾಟೀಲ್, ಎಸ್.ಬಿ ಸಾಂಬಾ, ಮಾಂತೇಶ್ ಕಣ್ಣೂರ್, ಸಿದ್ದು ಪಾಟೀಲ್, ಪ್ರಕಾಶ್ ಪಾಟೀಲ್, ಡಿ ಬಿ ಕಲಶೆಟ್ಟಿ, ಅಶೋಕ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.