ಕಲಬುರಗಿ | ಪೌರಕಾರ್ಮಿಕರ ವೇತನ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ : ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಪೌರಕಾರ್ಮಿಕರ ವೇತನವನ್ನು ಪಾವತಿಸುವಂತೆ ಆಗ್ರಹಿಸಿ, ಪೌರಕಾರ್ಮಿಕರು ಮತ್ತು ಪೌರಕಾರ್ಮಿಕ ಮುಖಂಡರಿಂದ ನಗರದ ಪಾಲಿಕೆಯ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ, ಡ್ರೈವರ್, ಲೋಡರ್ಸ್, ಕ್ಲೀನರ್ಸ್ ಸೇರಿದಂತೆ 1,500ಕ್ಕೂ ಹೆಚ್ಚಿನ ಪೌರಕಾರ್ಮಿಕರ ವೇತನವನ್ನು ಕಳೆದ ಐದು ತಿಂಗಳಿಂದ ಬಾಕಿ ಇರಿಸಲಾಗಿದೆ. ಹಲವು ಬಾರಿ ಮನವಿ ಮಾಡಿದರೂ ಪಾಲಿಕೆ ಅಧಿಕಾರಿಗಳು ಪೌರಕಾರ್ಮಿಕರಿಗೆ ವೇತನ ಪಾವತಿಸಿಲ್ಲ, ಹಾಗಾಗಿ ಕೂಡಲೇ ವೇತನವನ್ನು ನೀಡಬೇಕೆಂದು ಆಗ್ರಹಿಸಿದರು.
2017 ಜನವರಿಯಿಂದ ನವೆಂಬರ್ 2023ರವರೆಗೆ ಭಾನುವಾರದ ರಜೆ ಕೊಡದೆ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ಕೆಲಸ ಮಾಡಿದರ ಡಬಲ್ ಸಂಬಳ ಸೇರಿದಂತೆ ಬಾಕಿ ವೇತನ ಪಾವತಿ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವ ಶರಣಪ್ಪ ಹೊಸಮನಿ, ಭಾರತ ಬಾಯಿ ಶಂಕರ್, ರಾಣೋಜಿ ಸಾಯ್ಬಣ್ಣ, ಶಿವಪುತ್ರ ಮುಡ್ಡಿ, ಮಲ್ಲಪ್ಪ ಬಾವೆ, ಪೀರಪ್ಪ ಶಿವಶರಣಪ್ಪ, ಲಕ್ಷ್ಮಣ ಶಾಮರಾವ್, ಶೇಖಲಿ ಉಸ್ಮಾನ್ ಸಾಬ್, ಅನಿಲ್ ಕುಮಾರ್ ಚಕ್ರ, ನವಾಜ್ ಪಟೇಲ್, ರಾಜಕುಮಾರ್ ಸೋಮಣ್ಣ, ಗೋಪಾಲ ಲಕ್ಷ್ಮಣ್, ಹರ್ಷವರ್ಧನ್ ಪಟ್ಟಿದಾರ, ಅನಿಲ್ ಕುಮಾರ್ ಚಾಮ್ಬಳ್, ಸುರೇಶ್ ಹರವಾಳಕರ್, ಕಾಂತಪ್ಪ ಸಿಂಗೆ, ಲವ್ ಕುಮಾರ್ ಕಾಂಬಳೆ, ಅಜಯ್ ಕುಮಾರ್ ಸಾಳೆ, ಶಿವಾನಂದ್ ನೀಲೂರ್ ಕರ್ ಸೇರಿದಂತೆ ಹಲವಾರು ಪೌರ್ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.