ಕಲಬುರಗಿ | ಆಂದೋಲ ಗ್ರಾಮ ಪಂಚಾಯತ್ ಎದುರು ನೀರಿಗಾಗಿ ಪ್ರತಿಭಟನೆ

ಕಲಬುರಗಿ : ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದ ಭೀಮನಗರದಲ್ಲಿ ಕಳೆದ ಒಂದು ವರ್ಷದಿಂದ ನೀರಿನ ಸಮಸ್ಯೆ ಇದ್ದರು ಕೂಡ ಬಗೆಹರಿಸಿಲ್ಲ. ಕ್ಯಾನಲ್ ಹಾಗೂ ಬೋರವೇಲ್ ನೀರೇ ಸ್ಥಳಿಯರಿಗೆ ಆಸರೆಯಾಗಿತ್ತು. ಬೇಸಿಗೆಯ ಕಾರಣಕ್ಕೆ ಕ್ಯಾನಲ್ ನೀರು ಬರುತ್ತಿಲ್ಲ ಮತ್ತು ಬೋರವೆಲ್ ಕೂಡ ಹಾಳಾಗಿರುವುದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಭಿಮನಗರದಲ್ಲಿ ನೀರಿನ ಸಮಸ್ಯೆಯನ್ನ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತ್ ಮುಂದೆ ಕೊಡಗಳ ಸಮೇತ ಮಹಿಳೆಯರು ಪ್ರತಿಭಟನೆ ನಡೆಸಿದರು.
ಜೇವರ್ಗಿ ತಾಲೂಕಿನ ಆಂದೋಲ ಗ್ರಾಮ ಪಂಚಾಯತ್ ಮುಂದೆ ನೀರಿನ ಸಮಸ್ಯೆಯನ್ನ ಬಗೆ ಹರಿಸುವಂತೆ ಒತ್ತಾಯಿಸಿ ಭೀಮನಗರದ ನೀವಾಸಿಗಳು ಪ್ರತಿಭಟನೆ ನಡೆಸಿದರು.
ನಗರದಲ್ಲಿ ನಲ್ಲಿ (ನಳ) ನೀರಿನ ಸಮಸ್ಯೆಯು ಕಳೆದ ಒಂದು ವರ್ಷದಿಂದ ಹೀಗೆ ಇದೆ. ಇಲ್ಲಿಯವರೆಗೂ ಗ್ರಾಮದ ಹೊರವಲಯದಲ್ಲಿ ಹಾದು ಹೋದ ಕ್ಯಾನಲ್ ನೀರೆ ಬಳಸಲಾಗುತಿತ್ತು. ಬೋರವೆಲ್ ಗಳಂತು ಹಾಳಾಗಿದ್ದರು ಕೂಡ ದುರಸ್ತಿ ಮಾಡಿಸಲು ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಮುಂದಾಗಿಲ್ಲ. ನೀರಿನ ಸಮಸ್ಯೆ ಬಗೆಹರಿಸಲು ಶಾಸಕರು ಹಾಗೂ ತಾಲೂಕು ಆಡಳಿತ ಸೂಚಿಸಿದರೂ ಕೂಡ ಗ್ರಾಮ ಪಂಚಾಯತ್ ಅಧಿಕಾರಿಗಳು ಕಾರ್ಯಪ್ರವೃತರಾಗಿಲ್ಲ. ನೀರಿನ ಸಮಸ್ಯೆ ಬರುವುದಕಿಂತಲು ಮುಂಚೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳುವಂತೆ ತಾಲೂಕು ಆಡಳಿತ, ಜಿಲ್ಲಾಡಳಿತ ಸೂಚನೆ ನೀಡಿದರೂ, ಸಮಸ್ಯೆ ಬಗೆಹರಿಸಿಲ್ಲ ಎಂದು ದೂರಿದ್ದಾರೆ.
ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಕುರಿತು ಮನವಿ ಸ್ವಿಕರಿಸಿ ಸಮಸ್ಯೆಯನ್ನು ಬಗೆಹರಿಸುತ್ತೆವೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ರಾಜು ಜಳೆಂದ್ರ , ಮೌನೇಶ ಗೋಲಾ, ಶ್ರೀಕಾಂತ ಬಡಿಗೇರ, ಭಿಮರಾಯ ಕಟ್ಟಿ, ಮಲ್ಲಿಕಾರ್ಜುನ ಜಳೇಂದ್ರ, ದೇವಪ್ಪ ಕ್ಯಾಮನ್, ಭಿಮು ದೋರನಳ್ಳಿ, ಮರೆಪ್ಪ ಹೋತಿನಮಡು, ರೇಣುಕಾ ಹಂದಗಿ, ಕಲ್ಯಾಣಮ್ಮ ಹೋತಿನಮಡು, ಗುಂಡಮ್ಮ ಗೋಲಾ, ಶರಣಮ್ಮ ಕ್ಯಾಮನ್, ಮಾಳಮ್ಮ ಹಂದಗಿ, ಕಾಂತಮ್ಮ ಕಟ್ಟಿಮನಿ, ಗೋದಬಾಯಿ ಗೋಲಾ, ಸಕ್ರಮ್ಮ ಸನಸೂರ, ಸಕ್ರಮ್ಮ ಹಂದಗಿ, ಶೆಕಮ್ಮ ಮಳ್ಳಿ ಸೇರಿದಂತೆ ಅನೇಕರಿದ್ದರು.