ಕಲಬುರಗಿ | ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಿಸಲು ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ಕಲಬುರಗಿ : ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಮತ್ತು ಬಂಧನಕ್ಕೆ ಆಗ್ರಹಿಸಿ ನಗರದ ಎಂಎಸ್.ಕೆ ಮಿಲ್ ಜಿಲಾನಾಬಾದ್ ವೃತದಲ್ಲಿ ಜಿಲಾನಾಬಾದ್ ಅವಾಮಿ ಇತ್ತೇಹಾದ್ ಕಮಿಟಿ ವತಿಯಿಂದ ಪ್ರತಿಭಟನೆ ನಡೆಸಿ ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಒತ್ತಾಯಿಸಿ ಠಾಣೆ ಎದುರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಲಾಯಿತು.
ಪ್ರವಾದಿ (ಸ.ಅ) ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಮುಸ್ಲಿಂ ಸಮುದಾಯ ಸಹಿಸುವುದಿಲ್ಲ. ಈ ಕೂಡಲೇ ಯತ್ನಾಳ್ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕೆಂದು ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ವಹಾಜ್ ಬಾಬಾ, ಅಸ್ಲಮ್ ಬಾಜೆ, ಸೇಕ್ ಹುಸೈನ್, ಸಬ್ಬಿರ್ ಅಲಿ, ಜೀಲಾನ್ ಕಾಂತಾ, ಖಲೀಫಾ ಸೇರಿದಂತೆ ಬಡಾವಣೆಯ ಹಲವರು ಇದ್ದರು.
Next Story