ಕಲಬುರಗಿ | ಪಂಪ್ ಸೆಟ್ ಮೋಟರ್ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಐದು ನೀರೆತ್ತುವ ಮೋಟರ್ ಗಳು ವಶಕ್ಕೆ

ಕಲಬುರಗಿ | ಪಂಪ್ ಸೆಟ್ ಮೋಟರ್ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ನೀರೆತ್ತುವ ಪಂಪ್ ಸೆಟ್ ಮೋಟರ್ ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಚಿತ್ತಾಪುರ ತಾಲೂಕಿನ ಮಾಡಬೂಳ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆನಂದ ಸೋಮಶೇಖರ ತತ್ತಂಡಿ ಹಳೆ ಹೆಬ್ಬಾಳ ಮತ್ತು ಹಣಮಂತ ನಾಗಣ್ಣ ಮಾಂಗ್ ಹಳೆ ಹೆಬ್ಬಾಳ ಬಂಧಿತ ಆರೋಪಿಗಳು. ಬಂಧಿತರಿಂದ ವಿವಿಧೆಡೆಗಳಿಂದ ಕಳವುಗೈದಿರುವ ಒಟ್ಟು 91 ರೂ. ಮೌಲ್ಯದ ಐದು ಪಂಪ್ ಸೆಟ್ ಮೋಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಬ್ಬಾಳ ಗ್ರಾಮದ ಸಿಮಾಂತರ ಹೊಲದ ಪಕ್ಕದಲ್ಲಿರುವ ಕೆನ್ನಾಲ್ ಗೆ ಅಳವಡಿಸಿರುವ 5 ಎಚ್.ಪಿ.ಯ ನೀರೇತ್ತುವ ಪಂಪಸೆಟ್ ಮೋಟ್ ಕಳವಾಗಿರುವ ಬಗ್ಗೆ ಜ 16 ರಂದು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಇನ್ನೂ ನಾಲ್ಕು ಪಂಪ್ ಸೆಟ್ ಕಳವು ಪ್ರಕರಣವೂ ಬಯಲಾಗಿದೆ.
Next Story