ಕಲಬುರಗಿ | ಜಿಲ್ಲಾ ಕಸಾಪದಿಂದ ರಾಜ್ಯೋತ್ಸವ ಗೌರವ ಪುರಸ್ಕಾರ : ನ.3ರಂದು ಗಣ್ಯರಿಗೆ ಪ್ರದಾನ
ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಜಿಲ್ಲಾ ಮಟ್ಟದ ರಾಜ್ಯೋತ್ಸವ ಗೌರವ ಪುರಸ್ಕಾರಕ್ಕೆ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ವ್ಯಕ್ತಿಗಳಿಗೆ ನ.3ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೆಗಲ ತಿಪ್ಪಿ ಹೇಳಿದ್ದಾರೆ.
ಪ್ರಮುಖರಾದ ತೊನಸನಹಳ್ಳಿ ಅಲ್ಲಮಪ್ರಭು ಪೀಠದ ಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಶೈಕ್ಷಣಿಕ ಚಿಂತಕ ಡಾ. ಭುರ್ಲಿ ಪ್ರಹ್ಲಾದ, ಸಮಾಜ ಸೇವಕರಾದ ಗುರಣ್ಣ ಪಡಶೆಟ್ಟಿ ಉಡಚಣ, ಹಣಮಂತರಾಯ ಕಣ್ಣಿ, ಆಕಾಶವಾಣಿ ಕೇಂದ್ರದ ಸೋಮಶೇಖರ ರೂಳಿ, ಕಾರ್ಯನಿರ್ವಾಹಕ ಅಭಿಯಂತರಾದ ಮುಹಮ್ಮದ್ ಇಬ್ರಾಹಿಂ, ಹಿರಿಯ ಚಿತ್ರಕಲಾವಿದೆ ಮಂಜುಳಾ ಬಸವರಾಜ ಜಾನೆ, ಹಿರಿಯ ಕವಿ ಅಮೃತಪ್ಪ ಅಣೂರ, ಬನ್ನಪ್ಪ ಬಿ.ಕೆ. ಸೇಡಂ, ಶಾರದಾಮಣಿ ಪಾಟೀಲ, ರಂಗ ಶಿಕ್ಷಕ ಅಶೋಕ ತೊಟ್ನಳ್ಳಿ, ಅಮೃತ ಪೂಜಾರಿ, ಜಟಿಂಗರಾಯ ಶಾಖಾಪುರೆ, ಖಾಜಾ ಫರಿದೋದ್ದೀನ್, ಪತ್ರಕರ್ತ ಧರ್ಮೇಂದ್ರ ಪೂಜಾರಿ, ಉದ್ಯಮಿ ಮಹೇಶ ಚಿಂಚೋಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.3ರಂದು ಬೆಳಗ್ಗೆ 10:45ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾದ ರವೀಂದ್ರ ಢಾಕಪ್ಪ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಇಂದುಮತಿ ಪಾಟೀಲ, ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ಜಾಗೂ ಧರ್ಮಣ್ಣ ಎಚ್ ಧನ್ನಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದರು.