ಕಲಬುರಗಿ | ಎಚ್.ಕೆ.ಇ ಸೊಸೈಟಿಯ ವ್ಹಿ.ಜಿ.ವುಮೆನ್ಸ್ ಕಾಲೇಜಿನ 3 ವಿದ್ಯಾರ್ಥಿಗಳಿಗೆ ರ್ಯಾಂಕ್
ಕಲಬುರಗಿ : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ 2023-24ನೇ ಸಾಲಿನ ಅಂತಿಮ ವರ್ಷದ (ಬಿ.ಎಸ್ಸಿ.)ಪದವಿ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ವೀರಮ್ಮ ಗಂಗಸಿರಿ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿನಿಯರಾದ ಸಿದ್ಧಿ ಶಾಹ, ಇರ್ಫಾನಾ ಪರವೀನ್, ಸುಷ್ಮಾ ಬೇನೂರ ಅವರು ಕ್ರಮವಾಗಿ ವಿಶ್ವವಿದ್ಯಾಲಯದ 5ನೇ, 7ನೇ ಮತ್ತು 9ನೇಯ ರ್ಯಾಂಕ್ ಪಡೆದುಕೂಂಡಿದ್ದಾರೆ.
ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ನಮೋಶಿ, ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಕಾರ್ಯದರ್ಶಿಗ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಸ ಪಾಟೀಲ, ಸಂಚಾಲಕ ನಾಗಣ್ಣ ಘಂಟಿ, ಆಡಳಿತ ಮಂಡಳಿಯ ಸದಸ್ಯರು, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ನ್ಯಾಕ್ ಸಂಯೋಜಕರಾದ ಡಾ.ಮೋಹನರಾಜ ಪತ್ತಾರ ತಿಳಿಸಿದ್ದಾರೆ.
Next Story