ಕಲಬುರಗಿ | ಶಾಲಾ ಕಟ್ಟಡ, ರಸ್ತೆ ಕಾಮಗಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಅವರಿಂದ ಚಾಲನೆ
ಆದ್ಯತೆಯ ಮೇರೆಗೆ ಸ್ವಯಂ ಪ್ರೇರಿತ ಕಾಮಗಾರಿಗಳಿಗೆ ಒತ್ತು: ಬಿ.ಆರ್.ಪಾಟೀಲ್

ಕಲಬುರಗಿ : ಆಳಂದ ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ರಸ್ತೆ ಹಾಗೂ ಶಾಲಾ ಕಟ್ಟಡ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಅವರು ಮೂರು ದಿನಗಳಿಂದ ಸರಣಿ ಚಾಲನೆ ನೀಡುವುದರೊಂದಿಗೆ ಕ್ಷೇತ್ರದಲ್ಲಿ ಬೇಸಿಗೆ ನೀರು ಸೇರಿ ಮೂಲಸೌಲಭ್ಯಗಳ ಸಮಸ್ಯೆಗಳನ್ನು ಆಲಿಸಿ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಆಳಂದ ತಾಲೂಕಿನ ತುಗಾಂವ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಅಕ್ಷರ ಅವಿಸ್ಕಾರ ಯೋಜನೆ ಅಡಿಯಲ್ಲಿ 56 ಲಕ್ಷ ರೂ. ಅನುದಾನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಗುದ್ದಲಿ ಪೂಜೆಯನ್ನು ಶಾಸಕರು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಿಸಿಸಿ ನಿರ್ದೇಶಕ ಅಶೋಕ ಸಾವಳೇಶ್ವರ, ತಾಪಂ ಮಾಜಿ ಉಪಾಧ್ಯಕ್ಷ ಗುರುನಾಥ ಪಾಟೀಲ, ಕುರುಬ ಸಮಾಜ ಮುಖಂಡ ತುಕಾರಾಮ ವಗ್ಗೆ, ಸಿದ್ಧುಗೌಡ ಪಾಟೀಲ ಮಗಿ, ಈರಣ್ಣಾ ಹತ್ತರಕಿ, ಗುತ್ತಿಗೆದಾರ ದಯಾನಂದ ಚೌಲ ಸೇರಿದಂತೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಶಾಸಕರು ಸ್ವಗ್ರಾಮ ಸರಸಂಬಾ ಗ್ರಾಮದಿಂದ ಚಿಂಚೋಳಿ ಕೆ. ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್‌ವೈ ಯೋಜನೆ ಅಡಿಯಲ್ಲಿ 1.85 ಕೋಟಿ ರೂ. ವೆಚ್ಚದಲ್ಲಿ ಹಾಗೂ ಸರಸಂಬಾ ಗ್ರಾಮದಿಂದ ಮಾಹಾರಾಷ್ಟ್ರದ ಗೋಗಾಂವ ಬಾರ್ಡರ್ ವರೆಗೆ 2.19 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಗುದ್ದಲಿ ಪೂಜೆ ನೆರವೇರಸಿದರು.
ನಿಂಬರಗಾ ವಲಯದ ಮಾಡಿಯಾಳ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಅಕ್ಷರ ಅವಿಸ್ಕಾರ ಯೋಜನೆ ಅಡಿಯಲ್ಲಿ 75 ಲಕ್ಷ ರೂ. ಅನುದಾನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಮಾಡಿಯಾಳ ಕ್ರಾಸ್ ದಿಂದ ಜವಳಿ ಡಿ ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್‌ವೈ ಯೋಜನೆ ಅಡಿಯಲ್ಲಿ 5.6 ಕೋಟಿ ರೂ. ವೆಚ್ಚದಲ್ಲಿ ಡಾಂಬರಿಕರಣ ರಸ್ತೆ ಗುದ್ದಲಿ ಪೂಜೆ ನೇರವೇರಿಸಿದ್ದರು.
ಬಳಿಕ ಕುಡಕಿ ಗ್ರಾಮದ ಕೆ.ಕೆ.ಆರ್.ಡಿ.ಬಿ ಅಕ್ಷರ ಅವಿಸ್ಕಾರ ಯೋಜನೆ ಅಡಿಯಲ್ಲಿ 75 ಲಕ್ಷ ರೂ. ಅನುದಾನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಗುದ್ದಲಿ ಪೂಜೆ ನೇರವೇರಸಿ ಗುಣಪಟ್ಟದ ಕಾಮಗಾರಿ ಕೈಗೊಂಡು ಸಕಾಲಕ್ಕೆ ಕೋಣೆಗಳು ನಿಮಿಸುವಂತಾಗಬೇಕು ಎಂದು ಕಾಮಗಾರಿ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಮುನ್ನದಿನ ಕಡಗಂಚಿ, ನರೋಣಾ ಮುಖ್ಯರಸ್ತೆಯಿಂದ ಗೋಳಾ ಬಿ. ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್‌ವೈ ಯೋಜನೆ ಅಡಿಯಲ್ಲಿ 3.22 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಗುದ್ದಲಿ ಪೂಜೆ ನೆರವೇರಸಿ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಉತ್ತಮ ರಸ್ತೆ ನಿರ್ಮಾಣವಾಗಬೇಕು ಕಾಮಗಾರಿಗೆ ಸ್ಥಳೀಯ ನಿಗಾವಹಿಸಬೇಕು ಎಂದು ಹೇಳಿದರು.
ಕಿಣ್ಣಿಸುಲ್ತಾನ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಿಣ್ಣಿಸುಲ್ತಾನ್ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕರು ಚಾಲನೆ ನೀಡಿ, ತೊಗರಿ ಖರೀದಿಯಿಂದ ರೈತರಿಗೆ ಅನುಕೂಲವಾಗಲಿದೆ ಸರಣಿಯಂತೆ ಹೆಸರು ನೋಂದಾಯಿಸಿ ತೊಗರಿ ಮಾರಾಟ ಮಾಡಬೇಕು ಹಾಗೂ ಖರೀದಿ ಮತ್ತು ತೂಕದಲ್ಲಿ ಯಾವುದೇ ಸಮಸ್ಯೆಯಾಗದಂತೆ ಸಂಘದವರು ನೋಡಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಬಳಿಕ ಕಿಣ್ಣಿಸುಲ್ತಾನ್ ಗ್ರಾಮದಿಂದ ಹೊನ್ನಳ್ಳಿ ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್‌ವೈ ಯೋಜನೆ ಅಡಿಯಲ್ಲಿ 3.14 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಹಾಗೂ 25 ಲಕ್ಷ ರೂ. ವೆಚ್ಚದಲ್ಲಿ "ನಮ್ಮ ಹೊಲ ನಮ್ಮ ರಸ್ತೆ" ಕಾಂಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಸೇರಿದಂತೆ ಗ್ರಾಮ ಪಂಚಾಯತ್, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಮುನ್ನಹಳ್ಳಿ ಗ್ರಾಮದಿಂದ ಬಸವನಸಂಗೋಳಗಿ ಗ್ರಾಮದ ವರೆಗೆ ಕಲ್ಯಾಣ ಪಥ, ಪಿಎಂಜಿಎಸ್‌ವೈ ಯೋಜನೆ ಅಡಿಯಲ್ಲಿ 3.99 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಗುದ್ದಲಿ ಪೂಜೆ ನೆರವೇರಿಸಿ, ಬಸವಣ್ಣ ಸಂಗೋಳಗಿ ಗ್ರಾಮದ ಹದಗೇಟ ರಸ್ತೆ ನಿರ್ಮಾಣ ಉತ್ತಮಕಾರ್ಯ ಕೈಗೊಂಡು ಸಂಚಾರಕ್ಕೆ ಅನುಕೂಲ ಒದಗಿಸಬೇಕು ಎಂದು ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ದರ್ಗಾಶಿರೂರ್ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಅಕ್ಷರ ಅವಿಸ್ಕಾರ ಯೋಜನೆ ಅಡಿಯಲ್ಲಿ 1 ಕೋಟಿ ರೂ. ಅನುದಾನದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಕೆರೂರ ಗ್ರಾಮದಲ್ಲಿ 78 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಶಾಲಾ ಕೋಣೆಗಳ ನಿರ್ಮಾಣ ಮತ್ತು ನಿಂಬಾಳ ಗ್ರಾಮದಲ್ಲಿ 50 ಲಕ್ಷ ರೂ.ಗಳಲ್ಲಿ ಮೂರು ಶಾಲಾ ಕೋಣೆ ನಿರ್ಮಾಣಕ್ಕೆ ಶಾಸಕರು ಗುದ್ದಲಿ ಪೂಜೆ ನೇರವೇರಸಿದರು.
ಆಯಾ ಗ್ರಾಮಗಳ ಕಾಮಗಾರಿ ಪೂಜೆಯಲ್ಲಿ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು, ಸರ್ಕಾರಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ ಮತ್ತಿತರರ ಗಣ್ಯರು ಭಾಗವಹಿಸಿದ್ದರು.
ತುರ್ತು ಕೆಲಸಕ್ಕೆ ಮೊದಲಾದ್ಯತೆ :
ನಾನು ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕುಳಿತು ಸಮಸ್ಯೆ ಪಟ್ಟಿಮಾಡಿದವನ್ನಲ್ಲ. ಹಳ್ಳಿಗಳಿಗೆ ನಿರಂತರ ಓಡಾಟ ಎಂದಿನಂತೆ ಇದ್ದುದ್ದೆ. ಹೀಗಾಗಿ ಕ್ಷೇತ್ರದಲ್ಲಿನ ಎಲ್ಲ ರೀತಿಯ ಸಮಸ್ಯೆಗಳ ಅರಿವಿದೆ. ಜನರ ಬೇಡಿಕೆ ಮತ್ತು ತುರ್ತು ಅಗತ್ಯತೆಯನ್ನು ಎರಡೂ ಕ್ರೂಢಿಕರಿಸಿ ಅನುದಾನ ಬಂದಂತೆ ಕಾಮಗಾರಿಗಳನ್ನು ಸ್ವಯಂ ಪ್ರೇರಿತವಾಗಿ ಮಂಜೂರಾತಿಗೊಳಿಸಿ ಚಾಲನೆ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು ಶಾಲೆ, ರಸ್ತೆ, ನೀರಾವರಿ ಕಾಮಗಾರಿಗಳಿಗೆ ಪ್ರಯತ್ನಿಸಲಾಗುತ್ತಿದೆ. ಸದ್ಯ ಬೇಸಿಗೆ ನೀರಿನ ಬವಣೆ ನಿವಾರಿಸಬೇಕಾಗಿದೆ ಇಂಥ ಕೆಲಸಕ್ಕೆ ಜನರ ಸಹಕಾರ ಅಗತ್ಯವಾಗಿದೆ.
- ಬಿ.ಆರ್. ಪಾಟೀಲ್, ಶಾಸಕರು