ಕಲಬುರಗಿ | ಶಹಾಬಾದ್ ಕೃಷಿಕ ಸಮಾಜದ ಅಧ್ಯಕ್ಷರಾಗಿ ಶರಣಗೌಡ ಪಾಟೀಲ್ ಆಯ್ಕೆ
ಕಲಬುರಗಿ : ಶಹಾಬಾದ್ ತಾಲ್ಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಅವಧಿ ಐದು ವರ್ಷಗಳಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸೇರಿ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ತಾಲ್ಲೂಕು ಅಧ್ಯಕ್ಷರಾಗಿ ಶರಣಗೌಡ ಪಾಟೀಲ್ ರನ್ನು ಆಯ್ಕೆ ಮಾಡಲಾಯಿತು.
ಕೃಷಿ ಅಧಿಕಾರಿಗಳ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು, ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಆದೇಶ ಪ್ರತಿಗಳನ್ನು ವಿತರಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಚಾಲಕ ಮರಿಯಪ್ಪ ಹಳ್ಳಿ, ಕಾಂಗ್ರೆಸ್ ಅಧ್ಯಕ್ಷ ಡಾ.ಎಂ.ಎ.ರಶೀದ, ಬಿಜೆಪಿ ಮಾಜಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಮಾಣಿಕಗೌಡ ಪಾಟೀಲ, ಹಾಷಮ ಖಾನ, ಬಸವರಾಜ ಮದ್ದರಕಿ, ಬಾಕ್ರೋದ್ದಿನ, ಬಾಬುರಾವ ಪಂಚಾಳ, ಪೀರ ಪಾಷಾ ಇದ್ದರು.
Next Story