ಕಲಬುರಗಿ | ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೌಶಲ್ಯ ತರಬೇತಿ

ಕಲಬುರಗಿ : ಮಾಹಿತಿ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ ವಿಭಾಗದಿಂದ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮಕ್ಕೆ ಇಲ್ಲಿನ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಕೌಶಲ್ಯ ತರಬೇತಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾಟಾ ಸೈನ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ಸೈಬರ್ ಸೆಕ್ಯುರಿಟಿ ಡೆವೊಪ್ಸ್ ಗೌತಮ್ ಎಚ್ ಆರ್ ಮತ್ತು ಕಿರಣ್ ಗೌಡ ಎಚ್ ಎ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಆರ್ ಪಾಟೀಲ್ ಅಧ್ಯಕ್ಷೀಯ ಭಾಷಣ ಮಾಡಿದರು. ಡಾ.ಉದಯ್ ಎಸ್ ಬಲ್ಗಾರ್ ಸ್ವಾಗತಿಸಿದರು. ಡಾ.ನಾಗೇಶ್ ಎಸ್ ಸಾಲಿಮಠ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ.ಸೌಮ್ಯ ಗಾಯತೊಂಡ್ ನಿರೂಪಣೆ ಮಾಡಿದರು. ಪ್ರೊ.ನಿಕಿತಾ ಶೆಟ್ಕರ್ ವಂದಿಸಿದರು.
Next Story