ಕಲಬುರಗಿ | ವಿದ್ಯಾರ್ಥಿ ಜೀವನದಲ್ಲಿ ಎಸೆಸೆಲ್ಸಿ ಪ್ರಮುಖ ಘಟ್ಟ: ಜ್ಯೋತಿ ಪಾಟೀಲ
ಕಲಬುರಗಿ : ವಿದ್ಯಾರ್ಥಿ ಜೀವನದಲ್ಲಿ ಎಸೆಸೆಲ್ಸಿ ಪ್ರಮುಖವಾದ ಘಟ್ಟವಾಗಿದೆ, ಇಲ್ಲಿಯೇ ಭವಿಷ್ಯ ನಿರ್ಧರಿಸುವ ಸಮಯವಾಗಿದೆ ಎಂದು ಅಫಜಲ್ ಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಜ್ಯೋತಿ ಪಾಟೀಲ್ ತಿಳಿಸಿದರು.
ಅಫಜಲ್ ಪುರ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಗುರು ಮಳೇಂದ್ರ ಕಲ್ಯಾಣ ಮಂಟಪದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ತಾಲೂಕು ಘಟಕದಿಂದ ದಿ.ಡಾ.ಗಿರೀಶ್ ಗುಣಾರಿ ಸ್ಮರಣಾರ್ಥ ಅಂಗವಾಗಿ ಹಮ್ಮಿಕೊಂಡಿದ್ದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮತ್ತು ಗಣಿತ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ಈ ವರ್ಷದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ತಾಲೂಕಿನ ಮಕ್ಕಳು ಹೆಚ್ಚಿನ ರೀತಿಯಲ್ಲಿ ಅಂಕ ಪಡೆದು ಉತ್ತಮ ಸಾಧನೆ ಮಾಡಲು ಇಂತಹ ಶೈಕ್ಷಣಿಕ ಕಾರ್ಯಾಗಾರ ಆಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ದಿ.ಡಾ.ಗಿರೀಶ್ ಗುಣಾರಿ ಸ್ಮರಣಾರ್ಥ ಆಯೋಜನೆ ಮಾಡಿದ್ದು ಮಕ್ಕಳು ಇದರ ಸದುಪಯೋಗ ಪಡೆದುಕೊಂಡರೆ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಕಾಯಕ ಫೌಂಡೇಶನ್ ಸಂಸ್ಥಾಪಕ ಶಿವರಾಜ್ ಪಾಟೀಲ್, ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಗುರುಶಾಂತ್ ಗುಣಾರಿ, ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ, ಉಪಾಧ್ಯಾಯರ ಪ್ರಗತಿಪರ ಸಂಘದ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ, ತಾಲೂಕಾಧ್ಯಕ್ಷ ಗುರುರಾಜ ಆಹೇರಿ, ವ್ಹಿ.ವಾಯ್.ಗುಡಮಿ, ಪ್ರಕಾಶ್ ತಡಲಗಿ, ಲಕ್ಷ್ಮಣ ಝಳಕಿ, ಸಂತೋಷ ಹೆಗ್ಗಿ, ಲಕ್ಷ್ಮಣ ನಡುವಿನಕೇರಿ, ಶಿವಕುಮಾರ ಗುಂದಗಿ,ಗಿರೇಪ್ಪ ಕನ್ನೂರ,ರಾಜಶ್ರೀ ಹಿರೇಮಠ, ಶಿವಲೀಲಾ, ಸಂಪನ್ಮೂಲ ವ್ಯಕ್ತಿಗಳಾಗಿ ಅಂಬರೀಷ್ ಶೀಳಿ, ಮಳಯ್ಯ ಹಿರೇಮಠ, ಬಸವರಾಜ ಪಾವಲೆ ಮತ್ತಿತರರು ಉಪಸ್ಥಿತರಿದ್ದರು.