ಕಲಬುರಗಿ | ಬಾಬುರಾವ್ ಕೋಬಾಳ್ ಗೆ ಸ್ವರ ಸಾಮ್ರಾಟ್ ಪ್ರಶಸ್ತಿ ಪ್ರದಾನ

ಕಲಬುರಗಿ : ಸದ್ಗುರು ಮಲ್ಲಣ್ಣಪ್ಪ ಮಹಾರಾಜರು, ಅಲ್ಲಮ ಪ್ರಭು ಹಾಗೂ ಸುಲ್ತಾನ್ ಅಹ್ಮದ್ ಶಾವಲಿ ತೊನಸನಹಳ್ಳಿಯಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 10 ಜನ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಪತ್ರಕರ್ತರಾದ ಬಾಬುರಾವ್ ಕೋಬಾಳ್ ಅವರಿಗೆ ಶ್ರೀ ಪೀಠದಿಂದ, 2025ನೇ ಸಾಲಿನ ಸ್ವರ ಸಾಮ್ರಾಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಮಲ್ಲಣ್ಣಪ್ಪ ಮುತ್ಯಾ ಮಹಾಸ್ವಾಮಿಗಳು, ಸೊನ್ನದ ಡಾ.ಶಿವಾನಂದ್ ಮಹಾಸ್ವಾಮಿಗಳು, ಡಾ.ಸೌರಭ ಮಹಾಸ್ವಾಮಿಗಳು, ಕೋಲಿ ಸಮಾಜದ ಹಿರಿಯ ಮುಖಂಡರಾದ ಭೀಮಣ್ಣ ಸಾಲಿ, ಬಸವರಾಜ ಹೇರೂರ್,ಮಠಾಧೀಶರು ರಾಜಕೀಯ ಧುರೀಣರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
Next Story