ಕಲಬುರಗಿ | ಕಮಲಾಪುರ ತಾಲೂಕಿನ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ತಾಜುದ್ದೀನ್ ಪಟೇಲ್ ನೇಮಕ

ಕಲಬುರಗಿ: ಕಮಲಾಪುರ ತಾಲೂಕಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯ ತಾಲೂಕು ಅಧ್ಯಕ್ಷರನ್ನಾಗಿ ಅಂಬಲಗಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಾಜುದ್ದೀನ್ ಪಟೇಲ್ ಅವರನ್ನು ನೇಮಕ ಮಾಡಿದಕ್ಕೆ ಶಾಸಕಿ ಖನೀಜ್ ಫಾತೀಮಾ ಅವರು ರವಿವಾರ ಆದೇಶ ಪತ್ರ ನೀಡಿ ಸನ್ಮಾನಿಸಿದ್ದರು.
ಕಮಲಾಪುರ ತಾಲೂಕಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಅವರು ಕಮಲಾಪುರ ತಾಲೂಕಿನ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷರನ್ನಾಗಿ ತಾಜುದ್ದೀನ್ ಪಟೇಲ್ ಅವರಿಗೆ ಆಯ್ಕೆ ಮಾಡಿ ಆದೇಶ ಪತ್ರ ಹೊರಡಿಸಿದ್ದಾರೆ.
ಶಾಸಕಿ ಖನಿಜ ಪಾತಿಮಾ, ಶಾಸಕ ಅಲ್ಲಮಪ್ರಭು ಪಾಟೀಲ್, ಜಿಡಿಎ ಅಧ್ಯಕ್ಷ ಮಜರ್ ಆಲಂ ಖಾನ್, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಫರಾಜ್‍ಉಲ್ ಇಸ್ಲಾಮ್, ಐಮರ್ ಇಸ್ಲಾಂ, ನಯುಮ್ ಖಾನ್, ವಾಯದ್ ಅಲಿ ಫಾತೆಖನ್ನಿ, ಅಜಮುಲ್ ಗೊಲಾ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ನಾಯಕರಿಗೆ ನೂತನ ಅಲ್ಪಸಂಖ್ಯಾತರ ಘಟಕದ ತಾಲೂಕಾ ಅಧ್ಯಕ್ಷರಾದ ತಾಜುದ್ದೀನ್ ಪಟೇಲ್ ಅವರು ಕೃತಜ್ಞತೆ ಸಲ್ಲಿಸಿದ್ದರು.
Next Story