ಶ್ರೀಲಂಕಾ ಪ್ರವಾಸದಲ್ಲಿದ್ದ ಕಲಬುರಗಿ ಮೂಲದ ಟೆಕ್ಕಿ ಮೃತ್ಯು

ಕಲಬುರಗಿ: ಶ್ರೀಲಂಕಾ ಪ್ರವಾಸದಲ್ಲಿದ್ದ ಜೇವರ್ಗಿ ಮೂಲದ ಟೆಕ್ಕಿ ಹೊಟೇಲ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುವಾಗ ತೆಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಜೇವರ್ಗಿ ತಾಲ್ಲೂಕಿನ ಕಲ್ಲೂರ್ ಕೆ ಗ್ರಾಮದ ಸಂತೋಷ್ ಮಲ್ಲೆದ್ (34) ಮೃತ ಟೆಕ್ಕಿ ಎಂದು ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಸ್ನೇಹಿತರೊಂದಿಗೆ ಫೆ 15 ರಂದು ಶ್ರೀಲಂಕಾದ ಕ್ಯಾಂಡಿಗೆ ಪ್ರವಾಸ ತೆರಳಿದ್ದರು.
ಹೊಟೇಲ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುವಾಗ ತೆಲೆಗೆ ಗಾಯವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ಹೈದರಾಬಾದ್ ಮೂಲಕ ಕಲಬುರಗಿಗೆ ಟೆಕ್ಕಿ ಪಾರ್ಥಿವ ಶರೀರ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.
Next Story