ಕಲಬುರಗಿ | ಅದ್ದೂರಿಯಾಗಿ ಜರುಗಿದ ಆಳಂದ ತಾಲ್ಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನ
ಕಲಬುರಗಿ : ಆಳಂದ ತಾಲೂಕಿನ ಗಡಿ ಗ್ರಾಮ ಹಿರೋಳಿಯಲ್ಲಿ ಸೋಮವಾರ ನಡೆದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪ್ರಮುಖ ಮಾರ್ಗವಾಗಿ ಕೈಗೊಂಡಿದ್ದ ಸಮ್ಮೇಳನ ಸರ್ವಾಧ್ಯಕ್ಷ ಧರ್ಮಣ್ಣ ಧನ್ನಿ ಹಾಗೂ ನಾಡದೇವಿ ಭುವನೇಶ್ವರಿ ದೇವಿ ಭಾವಚಿತ್ರದ ಸಾಂಸ್ಕೃತಿಕ ಭವ್ಯ ಮೆರವಣಿಗೆಯೂ ಕನ್ನಡ ಗೀತೆಗಳ ಝೇಂಕಾರದ ಮಧ್ಯ ಅದ್ಧೂರಿಯಾಗಿ ಸಾಗಿ ಐತಿಹಾಸಿಕ ದಾಖಲೆ ಬರೆಯಿತು.
ಮೆರವಣಿಗೆಯಲ್ಲಿ ಸಾಹಿತಿಗಳು, ಕನ್ನಡ ಅಭಿಮಾನಿಗಳು, ಯುವಕರು, ಮಹಿಳೆಯರು ಹಿರೋಳಿ ಸೇರಿದಂತೆ ನೆರೆ ಹೊರೆಯ ವಿವಿಧ ಶಾಲೆ, ಕಾಲೇಜುಗಳ ಮಕ್ಕಳು ಮತ್ತು ಸಿಬ್ಬಂದಿಗಳು ಕನ್ನಡ ಭಾವುಟದೊಂದಿಗೆ ಕುಂಭ, ಕಳಸದೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಕುಣಿದು ಕುಪ್ಪಳಿಸಿ ಸಂಭ್ರಮಿಸಿದಗಳಿಗೆ ಗಡಿನಾಡಿ ಕನ್ನಡಿಗರಿಗೆ ಹುಮ್ಮಸು ಮತ್ತು ದೈರ್ಯ ತುಂಬಿತು. ಸಮ್ಮೇಳನಾಧ್ಯಕ್ಷ ಧರ್ಮಣ್ಣ ಧನ್ನಿ ಅವರನ್ನು ಸಾರೋಟಿನ ಮೂಲಕ ಮೆರವಣಿಗೆ ಮಾಡಲಾಯಿತು. ಸಾಹಿತ್ಯಾಸ್ತರು ಕುಣಿದು ಕುಪ್ಪಳಿಸಿದರು. ಮಕ್ಕಳ ನೃತ್ಯ, ಲೇಜಿಮ್ ಹಲಗೆ, ಡೊಳ್ಳು ಸದ್ದು ಗಮನ ಸೇಳೆಯಿತು.
ಸಿಯುಕೆ ಪ್ರೊ.ವಿಕ್ರಮ ಮಿಸಾಜೆ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಗಡಿ ಭಾಗದಲ್ಲಿ ಎಲ್ಲರೂ ಸಹೋದರದಂತೆ ಜೀವನ ನಡೆಸುತ್ತಿದ್ದಾರೆ. ಅನೇಕ ಕುರುಹುಗಳು ತಾಲ್ಲೂಕಿನಲ್ಲಿದೆ. ಕನ್ನಡ ಕಟ್ಟುವಲ್ಲಿ ಒಗ್ಗಟ್ಟಿನಿಂದ ಸಾಗಬೇಕು ಎಂದರು.
ಸಮ್ಮೇಳನಾಧ್ಯಕ್ಷ ಧರ್ಮಣ್ಣ ಧನ್ನಿ, ನಿಕಟಪೂರ್ವ ಅಧ್ಯಕ್ಷರಾಗಿದ್ದ ಪ್ರಭುಲಿಂಗ ನೀಲೂರೆ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ್ ಕೊರಳ್ಳಿ ಮಾತನಾಡಿದರು.
ಪ್ರಥಮ ಗೋಷ್ಠಿ ಅಧ್ಯಕ್ಷತೆಯನ್ನು ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ವಹಿಸಿದ್ದರು. ರಮೇಶ ಮಾಡಿಯಾಳಕರ್, ಕಸಾಪ ಮಾಜಿ ಅಧ್ಯಕ್ಷ ಡಾ.ಅಪ್ಪಸಾಬ ಬಿರಾದಾರ ಡಾ.ಮೋನಪ್ಪ ಎಲ್.ಪ್ರಾಚಾರ್ಯ ರವಿಚಂದ್ರ ಕಂಟೆಕೂರ ಪತ್ರಕರ್ತ ಸಂಜಯ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಅಶೋಕರಾವ್ ದೇಶಮುಖ, ರಾಜ್ಯ ಸರ್ಕಾರಿ ನೌಕರ ಅಧ್ಯಕ್ಷ ಸತೀಶ ಷನ್ಮುಖ, ನರಸಪ್ಪ ಬಿರಾದಾರ, ಚಂದ್ರಶೇಖರ ಪೂಜಾರಿ, ಸಾಹಿತಿ ಸೂರ್ಯಕಾಂತ ಸುಜಾತ, ಶೈಲಜಾ ಪೋಮಾಜಿ, ಸೋನಾಲಿ ಬಟಗೇರಿ, ಮಲ್ಲಿನಾಥ ಖಜೂರಿ, ಸಿದ್ಧರಾಮ ವಾಡೇದ, ಚಂದ್ರಕಾoತ ಪಿ.ತಳವಾರ, ಬಸವಲಿಂಗಪ್ಪ ಗಾಯಕವಾಡ, ಬಾಬುರಾವ್ ಅರುಣೋದಯ, ಮಲ್ಲಿಕಾರ್ಜುನ ಅನೇಕರು ಇದ್ದರು.
ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ರಜನಿಂಕಾoತ ಬರೋಡೆ ವಹಿಸಿ ಮಾತನಾಡಿದರು. ಪತ್ರಕರ್ತ ದಸ್ತಗೀರಿ ನದಾಫ್ ಯಳಸಂಗಿ ಸೇರಿದಂತೆ ಅನೇಕರು ಕವನ ಮಂಡಿಸಿ ಗಮನ ಸೆಳೆದರು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ನಡೆಯಿತು. ಸಾನ್ನಿಧ್ಯವನ್ನು ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಶ್ರೀಕಂಠ ಶಿವಾಚಾರ್ಯರು ಮತ್ತು ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಮಹಾರಾಷ್ಟ್ರ ಕಸಾಪ ರಾಜ್ಯಾಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಹಿರಿಯ ವೀರಣ್ಣಾ ಮಂಗಾಣೆ, ಸಿದ್ಧು ಹಿರೋಳಿ, ಸುನೀಲ ಹಿರೋಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಮ್ಮೇಳನದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಹಣಮಂತ ಸೇರಿ ಹಲವು ನಿರ್ಣಯ ಮಂಡಿಸಿದರು. ಜಿಲ್ಲಾ ಕಸಪಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಸಮ್ಮೇಳನ ಕುರಿತು ಮಾತನಾಡಿದರು. ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ, ಡಾ.ಶರಣರಾಜ್ ಚಪ್ಪರಬಂದಿ, ತಾಲೂಕು ಮಾಜಿ ಅಧ್ಯಕ್ಷ ಅಪ್ಪಸಾಬ ತೀರ್ಥೆ, ಹಾಲಿ ಗೌರವ ಕಾರ್ಯದರ್ಶಿ ಮಲ್ಲಿನಾಥ್ ತುಕಾಣಿ, ಸಿದ್ದಪ್ಪ ಜಮಾದಾರ್, ಕೋಷಾಧ್ಯಕ್ಷ ಅಶೋಕ ರೆಡ್ಡಿ, ರೂಪಚಂದ್ ಮಂಡ್ಲೆ, ಹವಳಪ್ಪ ಸುಂಟನೂರ್, ರಾಜಶೇಖರ್ ಕಡಗಣ ಇಕ್ಕಳಕಿ, ಗೋವಿಂದ್ ಹುಸೇನ್ಖಾನ್, ಶಿವಲೀಲಾ ಕೋಟೆ, ಕವಿತಾ ರಾಥೋಡ್, ವಲಯ ಅಧ್ಯಕ್ಷರಾದ ಶಾಂತೇಶ ಹೂಗಾರ್, ಸಿದ್ದಲಿಂಗ ಅಷ್ಟಗಿ, ಪರಮೇಶ್ವರ ದುಗೊಂಡ್, ಸಿದ್ದರಾಮ ಶಿರವಾಳ, ಶ್ರೀಶೈಲ ಭೀಮಪುರೆ, ಶಿವರಾಜ್ ತಳವಾರ್, ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿಗಳಾದ ಖಂಡಪ್ಪ ವಗ್ಗಿ, ಸುಧಾಕರ್ ಖಾಂಡೇಕರ್, ಶಿವಲಿಂಗಪ್ಪ ಸುತಾರ್, ಸಂಚಾಲಕ ಮಲ್ಲಿಕಾರ್ಜುನ್ ವಣದೆ, ಅಂಬಾರಾಯ ಕಾಂಬಳೆ, ಸಂತೋಷ್ ಕುಂಬಾರ್, ಸಲಹೆಗಾರ ಕಲ್ಯಾಣಿ ಸಾವಳಗಿ, ಮಲ್ಲಿಕಾರ್ಜುನ್ ಬುಕ್ಕೆ, ಬಸವರಾಜ್ ದೊಡ್ಮನಿ, ಮೋನಪ್ಪ ಸುತಾರ್, ಅಣ್ಣಾರಾಯ ಬೋರ್ಶೆಟ್ಟಿ, ಯೋಗಿರಾಜ ಮಾಡಿಯಾಳ, ಮಹಾಂತಪ್ಪ ನಿಂಗ್ಶೆಟ್ಟಿ, ದಯಾನಂದ್ ಹಿರೇಮಠ, ಚಂದ್ರಶೇಖರ್ ಕಟ್ಟಿಮನಿ, ದಿನೇಶ್ ಬೋಧನವಾಡಿ, ಮೃತ್ಯುಂಜಯ ಭಾಗೋಡಿ, ವಿಶ್ವನಾಥ್ ಗೋಡಕೆ ಹಾಗೂ ಗ್ರಾಪಂ ಸದಸ್ಯರು ಸಮಸ್ತ ಗ್ರಾಮಸ್ಥರು ಸೇರಿ ನೆರೆ ಹೊರೆಯ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.