ಕಲಬುರಗಿ | ಕಳ್ಳತನ ಪ್ರಕರಣ : ಆರೋಪಿಯ ಬಂಧನ

ಕಲಬುರಗಿ : ಆಳಂದ ಪೊಲೀಸ್ ಠಾಣೆಯ ಸಿಬ್ಬಂದಿಗಳು ಖಚಿತ ಮಾಹಿತಿಯನ್ನು ಆಧರಿಸಿ, ಕಳ್ಳತನ ಪ್ರಕರಣವೊಂದನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರು ಆರೋಪಿಯಿಂದ ಒಟ್ಟು 68,000 ರೂ. ಮೌಲ್ಯದ ಮುದ್ದೆಮಾಲನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 32 ಇಂಚಿನ ಎರಡು ಟಿವಿಗಳು, ಎರಡು ಖಾಲಿ ಗ್ಯಾಸ್ ಸಿಲಿಂಡರ್‌ಗಳು ಮತ್ತು ಮನೆ ಬಳಕೆಯ ವಸ್ತುಗಳು ಸೇರಿವೆ. ದಸ್ತಗಿರಿ ಮಾಡಲಾದ ಒಬ್ಬ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಗೆ ಜಿಲ್ಲಾ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಅವರು ಆಳಂದ ಪೊಲೀಸರ ಕರ್ತವ್ಯವನ್ನು ಪ್ರಶಂಸಿಸಿದ್ದಾರೆ.
ಪ್ರಕರಣವು ಏ.8ರಂದು ಆಳಂದ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದು, ಕ್ರೈಂ ಸಂಖ್ಯೆ 82/2025 ಅಡಿಯಲ್ಲಿ ಐಪಿಸಿ ಸೆಕ್ಷನ್ 300, 331(3), 331(4), ಮತ್ತು 305 ರಂತೆ ದಾಖಲಾಗಿತ್ತು. ಘಟನೆಯು ದಿನಾಂಕ ಎ.4ರಂದು ಮಧ್ಯರಾತ್ರಿ 12.30 ಸುಮಾರಿಗೆ ನಡೆದಿದ್ದು, ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಆಳಂದ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆಳಂದ ಪೊಲೀಸ್ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ, ಪಿಎಸ್‌ಐ ಭೀಮರಾಯ ಬಂಕ್ಷಿ ಮತ್ತು ಸಿಬ್ಬಂದಿಗಳಾದ ಮೆಹಬೂಬ್ ಶೇಖ್ (ಎಚ್‌ಸಿ-282), ಚಂದ್ರಶೇಖರ (ಎಚ್‌ಸಿ-277), ಗಣಪತರಾವ್ (ಎಚ್‌ಸಿ-204), ಸಚಿನ್ (ಪಿಸಿ-477), ಝಾಕೀರ್ (ಪಿ ಸಿ- 374), ವೆಂಕಟರಾವ್ (ಪಿಸಿ-94), ಮೌಲಾಲಿ (ಎಪಿಸಿ-21) ಮತ್ತು ಇತರರು ಭಾಗವಹಿಸಿದ್ದರು.
ಈ ತಂಡವು ಮಾನ್ಯ ಆರಕ್ಷಕ ಅಧಿಕ್ಷಕರು ಕಲಬುರಗಿ, ಹೆಚ್ಚುವರಿ ಅಧಿಕ್ಷಕರು ಕಲಬುರಗಿ ಹಾಗೂ ಉಪ-ಅಧಿಕ್ಷಕರು ಆಳಂದ ರವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿತು.