ಕಲಬುರಗಿ | ರೈತ ಮಹಿಳೆಯರಿಗೆ ತರಬೇತಿ: ಹೆಸರು ನೋಂದಣಿಗೆ ಸೂಚನೆ
ಕಲಬುರಗಿ : ಜಿಲ್ಲಾ ಕೃಷಿ ತರಬೇತಿ ಕೇಂದ್ರ ಯೋಜನೆಯಡಿ 2024-25ನೇ ಸಾಲಿನಲ್ಲಿ ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಧಾನ್ಯ ಸಂಗ್ರಹಣೆ ಕುರಿತು ರೈತ ಮಹಿಳೆಯರಿಗೆ ಇದೇ ಮಾ.20 ರಂದು ಒಂದು ದಿನದ ತರಬೇತಿಯನ್ನು ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ ಕಲಬುರಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಮುಖ್ಯಸ್ಥರು ತಿಳಿಸಿದ್ದಾರೆ.
ತರಬೇತಿ ಪಡೆಯಲು ಆಸಕ್ತಿಯುಳ್ಳ ಎಫ್.ಐ.ಡಿ. (FID) ಹೊಂದಿರುವ ರೈತ ಮಹಿಳೆಯರು ಕೃಷಿ ಅಧಿಕಾರಿ ಸುಜಾತಾ.ಆರ್.ರಾಜನಾಳಕರ-9448651201, ಯಾಸ್ಮಿನ್-9901604822 ಹಾಗೂ ಸಹಾಯಕ ಕೃಷಿ ನಿರ್ದೇಶಕಿ (ರೈ.ಮ) ನೀಲಕ್ಕಾ ನರಸಲಗಿ- 9513839555 ಇವರನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
Next Story