ಕಲಬುರಗಿ | ಸೆಪ್ಟಿಕ್ ಟ್ಯಾಂಕ್ಗೆ ಬಿದ್ದು ಇಬ್ಬರು ಮಕ್ಕಳು ಮೃತ್ಯು

ಕಲಬುರಗಿ : ಸೆಪ್ಟಿಕ್ ಟ್ಯಾಂಕ್ಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಮಂಗಳವಾರ ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಳಕೂರ ಗ್ರಾಮದ ತಿಪ್ಪಣ್ಣ ಜಡಿ ಅವರ ಪುತ್ರ ಗೀರಿಶ್ (3) ಮತ್ತು ಸಹೋದರಿ ಐಶ್ವರ್ಯ ಅವರ ಪುತ್ರಿ ಶ್ರೇಷ್ಠ(2) ಮೃತ ಮಕ್ಕಳು ಎಂದು ತಿಳಿದು ಬಂದಿದೆ.
ಬೆಳ್ಳಗಿನ ಉಪಹಾರ ಸೇವಿಸಿದ ನಂತರ ಮನೆಯಿಂದ ಹೊರಹೋಗಿದ್ದ ಇಬ್ಬರು ಮಕ್ಕಳು ಆಟವಾಡುತ್ತಿರಬಹುದು ಎಂದು ಮನೆಮಂದಿ ಸುಮ್ಮನಿದ್ದರು. ಆದರೆ, ಅರ್ಧಗಂಟೆ ಕಳೆದರೂ ಮಕ್ಕಳು ಕಾಣದಿದ್ದಾಗ ಗಾಬರಿಗೊಂಡ ಮನೆಯವರು ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದರು. ಆದರೂ ಮಕ್ಕಳು ಪತ್ತೆಯಾಗದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಮುಂದಿನ ಸೆಪ್ಟಿಕ್ ಟ್ಯಾಂಕ್ ಬಳಿ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಇಬ್ಬರು ಮಕ್ಕಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
Next Story