ಕಲಬುರಗಿ: ಹಿರಿಯ ಪತ್ರಕರ್ತ ರಾಜೇಂದ್ರ ಪಾಟೀಲ ನಿಧನ
ಕಲಬುರಗಿ: ಗ್ರಿನೋಬಲ್ಸ್ ಪತ್ರಿಕೆಯ ಹಿರಿಯ ಸಂಪಾದಕರಾದ ರಾಜೇಂದ್ರ ಟಿ. ಪಾಟೀಲ (85) ಅವರು ಹೈದರಾಬಾದ್ನಲ್ಲಿ ಬುಧವಾರ ರಾತ್ರಿ 2.00 ಗಂಟೆಗೆ ನಿಧನರಾಗಿದ್ದಾರೆ.
ಪತ್ನಿ ಶಾರದಾ ಪಾಟೀಲ, ಮಕ್ಕಳಾದ ಶಿವಕುಮಾರ ಪಾಟೀಲ, ಅಶೋಕ ಪಾಟೀಲ, ಗೌರಿ ಪಾಟೀಲ, ಲಕ್ಷ್ಮೀ ಪಾಟೀಲ, ಅಳಿಯಂದಿರು, ಮೊಮ್ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರಾಜೇಂದ್ರ ಪಾಟೀಲ್ ಅವರ ನಿಧನಕ್ಕೆ ವಾರ್ತಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಲಬುರಗಿ ನಗರದಲ್ಲಿರುವ ರಾಜೇಂದ್ರ ಪಾಟೀಲ ಅವರ ಪುತ್ರನ ಮನೆಯಲ್ಲಿ ಅಂತಿಮ ದರ್ಶನದ ಬಳಿಕ ಅವರ ಸ್ವಂತ ಊರಾದ ಮಾಲಗತ್ತಿ ಗ್ರಾಮದಲ್ಲಿ ಸಾಯಂಕಾಲ 4.00 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story