ಕಲಬುರಗಿ | ಗೆಸ್ಟ್ಹೌಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಕಲಬುರಗಿ : ಗೆಸ್ಟ್ಹೌಸ್ನಲ್ಲಿ ನೇಣು ಬಿಗಿದುಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರದ ಕೆಬಿಎನ್ ದರ್ಗಾದ ಬಳಿ ಇರುವ ಇಂಡಿಯನ್ ಗೆಸ್ಟ್ಹೌಸ್ನಲ್ಲಿ ನಡೆದಿದೆ.
ಬಳ್ಳಾರಿ ಮೂಲದ 25 ವರ್ಷದ ಸಾಧಿಕಾ ಮನಿಯಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಅಬ್ದುಲ್ ರಹೀಮ್ ಜೊತೆ ಬಳ್ಳಾರಿಯಿಂದ ಕಲಬುರಗಿಯ ಖ್ವಾಝಾ ಬಂದೇ ನವಾಝ್ ದರ್ಗಾಕ್ಕೆ ಬಂದಿದ್ದರು. ಪತ್ನಿಯನ್ನು ಗೆಸ್ಟ್ಹೌಸ್ನಲ್ಲೇ ಬಿಟ್ಟು ಪತಿ ಅಧೋನಿಗೆ ತೆರಳಿದ್ದರು ಎನ್ನಲಾಗಿದೆ. ಆದರೆ ಈ ವೇಳೆ ಪತ್ನಿ ಸಾಧಿಕಾ ಮನಿಯಾರ್ ನೇಣಿಗೆ ಶರಣಾಗಿದ್ದಾರೆ. ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story