ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಕನ್ನಡ ಭಾಷೆ ಉಸಿರಾಗಿದೆ : ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ : ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಕನ್ನಡ ಭಾಷೆ ಉಸಿರಾಗಿದೆ ಎಂದು ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದ್ದಾರೆ.
ನಗರದ ಕನ್ನಡ ಭವನದ ಆವರಣದಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕಲ್ಯಾಣ ಕರ್ನಾಟಕ ಪ್ರಶಸ್ತಿ ರತ್ನ ಪ್ರದಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಯ ಮೇಲೆ ಯಾವುದೇ ರೀತಿಯ ದಬ್ಬಾಳಿಕೆಯನ್ನು ಯಾವ ಕನ್ನಡಿಗನೂ ಸಹಿಸಲಾರ. ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ. ಎಲ್ಲಾ ಅಂಗಡಿಗಳು ಹಾಗೂ ಮಳಿಗೆಗಳ ಬೋರ್ಡ್ಗಳಲ್ಲಿ ಕನ್ನಡ ಬಳಕೆ ಆಗಬೇಕು. ಸಂಘಟನೆಗಳು ಅನ್ಯಾಯ ವಿರುದ್ಧ ನಿರಂತರ ಹೋರಾಟ ಮಾಡಬೇಕು ನಮ್ಮ ಸಹಕಾರ ಯಾವಾಗಲೂ ನಿಮಗೆ ಇರುತ್ತದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಕಿರಣ್ ಬಿಜಾಪೂರಿ, ನ್ಯಾಯವಾದಿ ಸಂದೀಪ್ ಹುಲಿ, ರೈತ ಮುಖಂಡ ದಯಾನಂದ್ ಪಾಟೀಲ್, ಸಾಹಿತಿ ಶಿವರಾಜ್ ಅಂಡಗಿ, ಹೋರಾಟಗಾರ ಸೋಮನಾಥ್ ಎಲ್. ಕಟ್ಟಿಮನಿ, ಶಿಕ್ಷಣ ಕ್ಷೇತ್ರದ ಇಂದಿರಾ ಜಿರೋಳಿಕರ್, ಸಮಾಜ ಸೇವಕ ಎಂ.ಡಿ. ಯಾಸೀನ್ ಶೇಖ್, ಯುನ್ನುಸ್ ಮಿಯಾ, ಶಿವಲಿಂಗಪ್ಪ ಹಾದಿಮನಿ, ಸಿ.ಎಸ್. ಮಾಲಿಪಾಟೀಲ್ ಅವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಿತ್ತಾಪುರದ ಕಂಬಳೇಶ್ವರ್ ಮಠದ ಸೋಮಶೇಖರ್ ಶಿವಾಚಾರ್ಯರು, ನದಿಸಿನ್ನೂರಿನ ಮಹಾಶಕ್ತಿಪೀಠದ ಗುರುರಾಜೇಂದ್ರ ಶಿವಯೋಗಿಗಳು, ಅಧೀಕ್ಷಕ ಅಭಿಯಂತರ ಸುರೇಶ್ ಶರ್ಮಾ, ಬಾಗಲಕೋಟೆಯ ಜ್ಯೂ ನಿಯರ್ ರವಿಚಂದ್ರನ್, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಜೈ ಕರವೇ ರಾಜ್ಯಾಧ್ಯಕ್ಷ ಸಚಿನ್ ಫರಹತಾಬಾದ್, ಚಂದ್ರಕಾಂತ ಗದಗಿ, ಧೂಳಪ್ಪ ದೊಡ್ಡಮನಿ, ವಿಜಯಕುಮಾರ್ ಕಟ್ಟಿಮನಿ, ಎಂ.ಡಿ.ಸಿದ್ದಕಿ, ಗಿರೀಶ ಭೋರೆ, ಜೈಭೀಮ, ಅಣವೀರ ಪಾಟೀಲ, ಸತೀಶ ಫರತಾಬಾದ, ಅಕ್ಷಯ, ಗುಂಡು ಸಿಂಗ್, ಸುರೇಶ ಹನಗುಡಿ ಸೇರಿದಂತೆ ಕಾರ್ಯಕರ್ತರು ಇದ್ದರು.