ಕಲಬುರಗಿ: ಕೇಸರ್ ಜವಳಗಾ ಶ್ರೀಮಠದ ಧಾರ್ಮಿಕ, ಶೈಕ್ಷಣಿಕ ಉತ್ಸವಕ್ಕೆ ಭರದ ಸಿದ್ಧತೆ
ಕಲಬುರಗಿ: ಆಳಂದ ತಾಲೂಕಿನ ಕೇಸರ ಜವಳಗಾ ಐತಿಹಾಸಿಕ ಜಡಿಬಸವೇಶ್ವರ ವಿರಕ್ತ ಮಠದಲ್ಲಿ ವಿವಿಧ ದೇವರುಗಳ ಅಮೃತ ಶಿಲಾಮೂರ್ತಿಗಳ ಪ್ರತಿಷ್ಠಾಪನೆ ನಿಮಿತ್ತ ಜ. 11ರಿಂದ 22ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಕುರಿತು ಭರದ ಸಿದ್ಧತೆ ಆರಂಭಗೊoಡಿದೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಶ್ರೀಮಠದ ಪೀಠಾಧಿಪತಿ ವೀರಂತೇಶ್ವರ ಮಹಾಸ್ವಾಮಿಗಳು, ಶ್ರೀಮಠದ ಶ್ರೀ ಜಡಿಬಸವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಬೆಳ್ಳಿ ಮೋಹತ್ಸವ ನಿಮಿತ್ತ ಜಗದ್ಗುರು ರೇಣುಕಾಚಾರ್ಯ, ವಿಶ್ವಾರಾಧ್ಯ, ಬಸವೇಶ್ವರ ಮತ್ತು ಹಾನಗಲ್ ಕುಮಾರೇಶ್ವರ, ಶ್ರೀ ವೀರಂತೇಶ್ವರ ಹಾಗೂ ಶ್ರೀ ಜಡಿಬಸವಲಿಂಗೇಶ್ವರ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ, ಅನಾವರಣ ಮತ್ತು ಶ್ರೀಮಠದ ಮೂಲಕರ್ತೃ ಶ್ರೀ ಜಡಿಬಸವಲಿಂಗೇಶ್ವರ ಹಾಗೂ ಲಿಂ.ಶ್ರೀ ಜಡಿಬಸವಲಿಂಗೇಶ್ವರ ಚಿನ್ನದ ಮೂರ್ತಿ ಸ್ಥಾಪನೆ, ಗುಡ್ಡಾಪುರ ದಾನಮ್ಮಾದೇವಿ ಪುರಾಣ, ಲಕ್ಷದೀಪೋತ್ಸವ, ಶಿವದೀಕ್ಷೆ, ಜಂಗಮ ವಟುಗಳಿಗೆ ಅಯ್ಯಾಚಾರ, ಕುಂಭಮೇಳ, ಪಲ್ಲಕ್ಕಿ ಮೆರವಣಿಗೆಯಂತ ಈ ಐತಿಹಾಸಿಕ ಕಾರ್ಯ ಶ್ರೀಮಠದಿಂದ ಹಾಗೂ ಭಕ್ತರ ಸಹಾಕಾರಿಂದ ಗಡಿನಾಡಿನಲ್ಲಿ ನಡೆಯಲಿದೆ ಎಂದು ಶ್ರೀಗಳು ಹೇಳಿದರು.
ಜ.11ರಂದು ನಂದಗಾoವ ಮಠದ ಶ್ರೀ ರಾಜಶೇಖರ ಮಹಾಸ್ವಾಮಿಗಳ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
12ರಂದು ಗುಡ್ಡಾಪೂರ ಧಾನಮ್ಮದೇವಿ ಪುರಾಣ ಆರಂಭಗೊoಡು 21ರಂದು ಮಹಾಮಂಗಲ, ಲಕ್ಷದಿಪೋತ್ಸವ , ರಸಮಂಜರಿ, ಜಾದು ಕಾರ್ಯಕ್ರಮ ನಡೆಯುವುದು. 22ರಂದು ಸಂಜೆ 7ಗಂಟೆಗೆ ಪ್ರಮುಖ ರಸ್ತೆಗಳ ಮೂಲಕ ಶ್ರೀ ಜಡಿಬಸವೇಶ್ವರ ಚಾಂದಿ ಮೂರ್ತಿಯ ಪಲ್ಲಕ್ಕಿ, ಕುಂಬ ಉತ್ಸವ ನಡೆಯುವುದು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಕರ್ನಾಟಕ ಹಾಗೂ ಮಹಾರಾಷ್ಟçದ ಮಠಗಳ ಹಿರಿಯ ಮತ್ತು ಕಿರಿಯ ಮಠಾಧೀಶರು, ಧಾರ್ಮಿಕ ಮುಖಂಡರು, ಎರಡೂ ರಾಜ್ಯಗಳ ಶಾಸಕರು, ಸಚಿವರು, ರಾಜಕೀಯ ಗಣ್ಯರು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಎಂದಿನoತೆ ಹೆಚ್ಚಿನ ಸಂಖ್ಯೆಯಲ್ಲಿ ಈ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದರ್ಶನಾಶೀರ್ವಾದ ಪಡೆಯಬೇಕು ಎಂದು ಶ್ರೀ ವಿರಂತೇಶ್ವರ ಶ್ರೀಗಳು ಭಕ್ತಾದಿಗಳಲ್ಲಿ ತಿಳಿಸಿದ್ದಾರೆ.