ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಲಿ : ನ್ಯಾ.ಶ್ರೀನಿವಾಸ ನವಲೆ
ಕಲಬುರಗಿ : ಏಡ್ಸ್ ರೋಗವೊಂದು ಭಯಾನಕ ಪಿಡುಗಾಗಿದೆ, ಇದರ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವ ಪ್ರಾಧಿಕಾರದ ಸದಸ್ಯರಾದ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಅವರು ಹೇಳಿದ್ದಾರೆ.
ಮಂಗಳವಾರದಂದು ಹಳೆ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೆಡ್ ರಿಬ್ಬನ್ ಕ್ಲಬ್ಗಳು, ಸ್ವಯಂ ಸೇವಾ ಸಂಸ್ಥೆಗಳು, ಎನ್.ಎಸ್.ಎಸ್.ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ʼಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ ನನ್ನ ಆರೋಗ್ಯ ನನ್ನ ಹಕ್ಕು ವಿಶ್ವ ಏಡ್ಸ್ ದಿನದ ಕಾರ್ಯಕ್ರಮʼಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹೆಚ್ಐವಿ ಏಡ್ಸ್ ರೋಗದ ಬಗ್ಗೆ ಜನರಲ್ಲಿ ಅತಿಯಾಗಿ ಅರಿವು ಮೂಡಿಸಬೇಕು. ಲೈಂಗಿಕ ಹೊಂದಿದ ಮಹಿಳೆಯರು ಲಿಂಗತ್ವ ಹೊಂದಿದ ಅಲ್ಪಸಂಖ್ಯಾತರಿಗೆ ಅಷ್ಟೇ ಬೇಕಾದಂತಹ ಮಾಹಿತಿ ಅಲ್ಲ, ಇದು ಎಲ್ಲರಿಗೂ ಬೇಕಾದಂತಹ ಮಾಹಿತಿಯಾಗಬೇಕು. ಸರಕಾರದ ಎನ್ಜಿಓ ಗಳ ಮೂಲಕ ಈಗಾಗಲೇ ಅರಿವು ಮೂಡಿಸುವ ಕಾರ್ಯಕ್ರಮ ಪ್ರಾರಂಭವಾಗಿದೆ ಎಂದರು.
ಭಾರತ ಸವಿಂಧಾನದಲ್ಲಿ ʼರೈಟು ಹೆಲ್ತ್ʼ ಎಂಬ ಹಕ್ಕು ಇದೆ. ಅಂದರೆ ನನಗೆ ಆರೋಗ್ಯದ ಹಕ್ಕು ಇದೆ, ನಾನು ಆರೋಗ್ಯವಾಗಿರಬೇಕು ನನಗೆ ಏನಾದರೂ ಬಡತನ ಇದ್ದರೆ ಸರಕಾರ ನನಗೆ ಆರೋಗ್ಯ ಸೌಲಭ್ಯವನ್ನು ಒದಗಿಸಿ ಕೊಡಬೇಕು ಎಂದು ಹೇಳಿದರು.
ಸಹ ನಿರ್ದೇಶಕರು ವಿಭಾಗೀಯ ಜಂಟಿ ಕಾರ್ಯಲಯ ನಿರ್ದೇಶಕರಾದ ಎಸ್.ರುದ್ರವಾಡಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕಾದ ವಯಸ್ಸಿನಲ್ಲಿ ಮನಸ್ಸು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಎಚ್ಐವಿ ಎಂದರೆ ನಾವು ಎಚ್ಚರದಿಂದರಬೇಕು ಮುಂದೆ ಬರುವಂತಹ ತೊಂದರೆಗಳು ನಾವು ತಡೆಗಟ್ಟಬೇಕು. ಈ ಒಂದು ರೋಗದ ಬಗ್ಗೆ ಜನರಲ್ಲಿ ಮತ್ತು ಸಾರ್ವಜನಿಕರ ಜಾಗೃತಿ ಮೂಡಿಸಬೇಕು ಎಂದರು.
ಡಿಹೆಚ್ಓ ಡಾ.ಶರಣಬಸಪ್ಪ ಕ್ಯಾತ್ನಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ ಎಸ್ ಎಸ್ ಅಧಿಕಾರಿಗಳು ಇಎಸ್ ಆಸ್ಪತ್ರೆ ವಿಧ್ಯಾರ್ಥಿಗಳು ನೋಬಲ್ ಎಸಿಸಿ ಕೇಂದ್ರ ಸಿಬ್ಬಂದಿಗಳು ಎನ್ ಜಿ ಓ ಮುಖ್ಯಸ್ಥರು ಹಾಗೂ ಜಿಮ್ಸ್ ಆಸ್ಪತ್ರೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಎಲ್ಲಾ ಎನ್ಜಿಓ ಸಿಂಬ್ಬದಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದಕ್ಕೂ ಮುನ್ನ ಜಿಮ್ಸ್ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನಚರಣೆ ಅಂಗವಾಗಿ ಜಾಗೃತಿ ಜಾಥಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಚಾಲನೆ ನೀಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಅಧಿಕಾರಿಗಳು ಡಾ.ಶರಣಬಸಪ್ಪ ಕ್ಯಾತನಾಳ, ವಿಭಾಗೀಯ ಕಾರ್ಯಾಲಯದ ಜಂಟಿ ನಿರ್ದೇಶಕ ಡಾ.ಶರಣ ಬಸಪ್ಪ ಗಣಜಲಖೇಡ್, ಡಾ.ರೀಮಾ ಹರವಾಳ, ಡಾ.ರಾಖೇಶ ಕಾಂಬಳೆ, ವಿವೇಕಾನಂದ ರೆಡ್ಡಿ, ಡೆಪ್ಕೋ ಅಧಿಕಾರಿ ಡಾ.ಚಂದ್ರಕಾಂತ್ ನರಿಬೋಳಿ, ಡೆಪ್ಕೋ ಮೇಲ್ವಿಚಾರಕ ಮಲ್ಲಿಕಾರ್ಜುನ್ ಸೇರಿದಂತೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.