ಕಲಬುರಗಿಯಲ್ಲಿ ಲೋಕಾಯುಕ್ತ ದಾಳಿ
ಕಲಬುರಗಿ, ಜು.11: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿಯ ಮೂರು ಕಡೆ ಇಂದು ಬೆಳಗಿನ ಜಾವ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಂ.ಬಿ ನಗರ, ಪಾಳಾ ಗ್ರಾಮ ಸೇರಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮೂಲತಃ ಕಲಬುರಗಿಯ ಕೆಂಗೇರಿ ಬಿಬಿಎಂಪಿ ವಿಭಾಗದ ಕಂದಾಯ ಅಧಿಕಾರಿಯಾಗಿರುವ ಬಸವರಾಜ್ ಮಗಿ ಅವರ ಬೆಂಗಳೂರು ಮತ್ತು ಕಲಬುರಗಿ ಮನೆಗಳ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳು ಪರಿಶೀಲನೆ ನಡೆಸಿದ್ದಾರೆ.
Next Story