ಕಲಬುರಗಿ: ಸಾಲ ಭಾದೆ ತಾಳಲಾರ ವಿಷ ಸೇವಿಸಿ ರೈತ ಆತ್ಮಹತ್ಯೆ
ಕಲಬುರಗಿ: ಸಾಲ ಭಾದೆ ತಾಳಲಾರದೆ ರೈತ ಓರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕಾಳಗಿ ತಾಲ್ಲೂಕಿನ ರುಮ್ಮನಗೂಡ್ ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ರುಮ್ಮುನಗುಡ ಗ್ರಾಮದ ನಿವಾಸಿ ಹೈದರ್ ಪಟೇಲ್ (65) ಎಂದು ಗುರುತಿಸಲಾಗಿದೆ.
ಚಿಂಚೋಳಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಬೆಳೆ ಸಾಲ 85 ಸಾವಿರ, ಕೊಡ್ಲಿ ಗ್ರಾಮದ ವಿಎಸ್ಎಸ್ಎನ್ ಬ್ಯಾಂಕ್ ನಲ್ಲಿ 50 ಸಾವಿರ, ಖಾಸಗಿ ಸಾಲ 3,50,000 ಸೇರಿ 4.85 ಸಾವಿರ ಸಾಲ ಮಾಡಿ, ತನ್ನ ಕೃಷಿ ಜಮೀನಲ್ಲಿ ಬೆಳೆದ ತೊಗರಿ ಇಳುವರಿಗೆ ಬಂದಿರದ ಕಾರಣ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಪತ್ನಿ ಮತ್ತು ಐವರು ಮಕ್ಕಳು ಇರುವ ಹೈದರ್ ಪಟೇಲ್ ಅವರು ಮನನೊಂದು ಮನೆಯಲ್ಲಿ ತೊಗರಿಗೆ ಹೊಡೆಯುವ ವಿಷ ಸೇವಿಸಿದ್ದಾರೆ. ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಸಾಲ ಮನ್ನಾ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ.
Next Story