ಕೂಚ್ ಬಿಹಾರ್ ಟ್ರೋಫಿಗೆ ತಂಡ ಪ್ರಕಟಿಸಿದ ಕೆಎಸ್ ಸಿಎ: ಕಲಬುರಗಿಯ ಸನ್ಮಯ್ ಆಯ್ಕೆ

ಕಲಬುರಗಿ: ನಗರದ ಯುವ ಕ್ರಿಕೆಟಿಗ ಸನ್ಮಯ್ ರುದ್ರವಾಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಿಂದ ಆಯೋಜಿಸುವ ಪ್ರಸಕ್ತ ಸಾಲಿನ ಕೂಚ್ ಬಿಹಾರ್ ಟ್ರೋಫಿಗಾಗಿ ಪ್ರಕಟಿಸಿರುವ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕೂಚ್ ಬಿಹಾರ್ ಟ್ರೋಫಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಸೋಮವಾರ ಧೀರಜ್ ಗೌಡ ನೇತ್ವದಲ್ಲಿ 15 ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ.
ಕರ್ನಾಟಕ ತಂಡ: ಧೀರಜ್ ಗೌಡ (ನಾಯಕ), ಸಮಿತ್ ದ್ರಾವಿಡ್ (ಉಪ ನಾಯಕ), ಶಿವಮ್ ಸಿಂಗ್, ಪ್ರಣವ್ ಬಾಬು, ರವಿ ಖೈರವ್ ರೆಡ್ಡಿ, ಕಾರ್ತಿಕೇಯ ಕೆ.ಪಿ., ಸಿದ್ದಾರ್ಥ ಅಖಿಲ್, ಸಮರ್ಥ ನಾಗರಾಜ, ವೈಭವ ಶರ್ಮಾ, ಪ್ರಥಮ ಆರ್., ರಾಗ ಪೂಂಜಾ, ಗೌರವ ಶಾನಭಾಗ, ಸೀನ್ ಪ್ರತ್ಯುಷ್, ಸನ್ಮಯ್ ರುದ್ರವಾಡಿ, ರೋನಿತ್ ಅಯ್ಯಂಗಾರ್.
ಕೆ.ಬಿ. ಪವನ್ ಕೋಚ್ ಆಗಿದ್ದು, ಎಸ್.ಎಲ್. ಅಶೋಕ್ ಸಹಾಯಕ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಬರೋಡಾ ವಿರುದ್ಧ ಆರಂಭಿಕ ಪಂದ್ಯ
ಕೂಚ್ ಬಿಹಾರ್ ಟ್ರೋಫಿಯಲ್ಲಿ ನ.6ರಂದು ಬರೋಡಾ ತಂಡವನ್ನು ಎದುರಿಸುವ ಮೂಲಕ ಕರ್ನಾಟಕ ಟೂರ್ನಿ ಆರಂಭಿಸಲಿದೆ. ಬಳಿಕ ನ.13ರಂದು ದಿಲ್ಲಿ, ನ.20ರಂದು ಚಂಡೀಗಡ, ನ.28ರಂದು ಒಡಿಶಾ, ಡಿ.6ರಂದು ಮೇಘಾಲಯ ತಂಡದ ವಿರುದ್ಧ ಆಡಲಿದೆ.