ಕಲಬುರಗಿ | ಕ್ರೂಸರ್ ಪಲ್ಟಿ: ಓರ್ವ ಮೃತ್ಯು, ಐವರಿಗೆ ಗಾಯ

ಕಲಬುರಗಿ: ಪ್ರಯಾಣಿಕರನ್ನು ಕರೆದೊಯ್ಯುವ ಕ್ರೂಸರ್ ಪಲ್ಟಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಕೆಸರಟ್ಟಿಗೆ ಹತ್ತಿರ ಗಾರ್ಡನ್ ಎದುರುಗಡೆ ಇಂದು ಬೆಳಗ್ಗೆ ನಡೆದಿದೆ.
ಸಿದ್ದರಾಮ್ (45) ಮೃತಪಟ್ಟವರು. ಮರ್ತ್ತೂರಿನಿಂದ ಕಾರ್ಮಿಕರನ್ನು ಕಲಬುರಗಿಗೆ ಕರೆದೊಯ್ಯುವಾಗ ಕೆಸರಟ್ಟಿಗೆ ಹತ್ತಿರ ಗಾರ್ಡನ್ ಎದುರುಗಡೆ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಚಾಲಕನ ಕೈ ಮುರಿದಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Next Story