ಪಿಡಿಎ ಇಂಜಿನಿಯರಿಂಗ್ ಕಾಲೇಜು ಹಾಗೂ ಐಐಐಟಿ ರಾಯಚೂರು ನಡುವೆ ನಯನ 2.0 ಜ್ಞಾಪನಾ ಒಪ್ಪಂದ
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜು ಹಾಗೂ ಐಐಐಟಿ ರಾಯಚೂರು ನಡುವೆ ನಯನ 2.0 ಮೆಮರೊಂಡಮ್ ಆಫ್ ಅಸೋಸಿಯೇಷನ್ ( ಜ್ಞಾಪಕ ಪತ್ರ ಸಹಯೋಗ) ಒಪ್ಪಂದ ನಡುವೆ ನಡೆಯಿತು.
ಈ ಜ್ಞಾಪಕ ಪತ್ರ ಸಹಯೋಗದಿಂದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವಾಗುವದರ ಜೊತೆಗೆ ಉನ್ನತ ಶಿಕ್ಷಣ ಅನುಕೂಲವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಈ ಎರಡು ಸಂಸ್ಥೆಗಳ ಒಪ್ಪಂದ ಸಂದರ್ಭದಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯರಾದ ಡಾ.ಎಸ್ ಆರ್ ಪಾಟೀಲ್, ಉಪ ಪ್ರಾಚಾರ್ಯರಾದ ಡಾ. ಎಸ್ ಆರ್ ಹೊಟ್ಟಿ, ಪ್ರಾಧ್ಯಾಪಕರಾದ ಡಾ.ನಾಗೇಶ್ ಸಾಲಿಮಠ, ಡಾ. ನಾಗೇಂದ್ರ ಎಚ್ ರಾಯಚೂರು ಐಐಟಿ ನಿರ್ದೇಶಕರಾದ ಹರೀಶ್ ಕುಮಾರ್ ಸರ್ಡಾನಾ, ಡಾ.ದುಬಚರ್ಲಾ ಜ್ಞಾನೆಶ್ವರ, ಡಾ.ನಟೇಶ್ ಮತ್ತು ಕರ್ನಾಟಕ ಸ್ಟಾರ್ಟ್ ಅಫ್ ನ ಸಹಾಯಕ ವ್ಯವಸ್ಥಾಪಕ ಎಚ್.ಎಸ್ ಶಶಾಂಕ್ ಉಪಸ್ಥಿತರಿದ್ದರು.