ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನಿಗೆ ವಿಠ್ಠಲ-ರಖುಮಾಯಿ ನೀಡಿ ಸನ್ಮಾನ

ಕಲಬುರಗಿ: ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು.
ಈ ಸಮ್ಮೇಳನಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಳಂದ ಪಟ್ಟಣದ ದಿಗಂಬರ ಜೈನ್ ಪ್ರೌಢಶಾಲೆ ಮುಖ್ಯಶಿಕ್ಷಕರೂ ಆದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಳ ಉಪಾಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಗುರಯ್ಯ ಆರ್. ಸ್ವಾಮಿಯವರು ಸಮ್ಮೇಳನದ ಪರ ವಿಠ್ಠಲ-ರಖುಮಾಯಿ ಮೂರ್ತಿ ನೀಡಿ ವೇದಿಕೆಯಲ್ಲಿ ಪ್ರಧಾನಿಗಳಿಗೆ ಸನ್ಮಾನಿಸಿ ಗೌರವಿಸಿದ್ದಾರೆ.
ವೇದಿಕೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವಿಂದ್ರ ಫಡ್ನವಿಸ್, ಮಹಾಮಂಡಳ ಅಧ್ಯಕ್ಷ ಉಷಾ ತಂಬೆ, ಕೇಂದ್ರದ ಮಾಜಿ ಸಚಿವ ಶರದ್ ಪವಾರ, ಸಂಜಯ ನೆಹಾರ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷಾ ಒಕ್ಕೂಟದ ಮಹತ್ವದ ಕುರಿತು ಚರ್ಚೆಗಳು ನಡೆದವು. ಸಮಾರಂಭದಲ್ಲಿ ಕರ್ನಾಟಕದಿಂದ ಅನೇಕ ಮರಾಠಿ ಹಿರಿಯ ಸಾಹಿತಿಗಳು ಸೇರಿದಂತೆ ವಿವಿಧ ರಾಜ್ಯಗಳ ಮರಾಠಿ ಸಾಹಿತ್ಯ ಪ್ರೇಮಿಗಳು, ಲೇಖಕರು ಹಾಗೂ ಗಣ್ಯರು ಭಾಗವಹಿಸಿದ್ದರು.