ಕನ್ನಡಿಗರಿಗೆ ಮಾತೃಭಾಷೆಯಾದ ಕನ್ನಡ ಹೆತ್ತ ತಾಯಿಗೆ ಸಮಾನ: ರಾವೂರ
ಶಹಾಬಾದ : ಕನ್ನಡಿಗರಿಗೆ ಮಾತೃಭಾಷೆಯಾದ ಕನ್ನಡ ಹೆತ್ತ ತಾಯಿಗೆ ಸಮಾನ ಎಂದು ತಾಪಂ ಇಒ ಮಲ್ಲಿನಾಥ ರಾವೂರ ಹೇಳಿದ್ದಾರೆ.
ತಾಲೂಕು ಆಡಳಿತ ವತಿಯಿಂದ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ತಾಯಿ ಜೀವ ಕೊಟ್ಟಿದ್ದಾಳೆ. ಈ ನಾಡು ನಮಗೆ ಅನ್ನ ಕೊಟ್ಟಿದೆ. ಈ ನಾಡಿನ ಭಾಷೆಯಾದ ಕನ್ನಡವನ್ನು ಬೆಳೆಸುವಂತ ಕೆಲಸವನ್ನು ಕನ್ನಡಿಗರಾದ ನಾವು ಮಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಜಗದೀಶ ಚೌರ್, ಜಾಗತೀಕರಣ, ಉದಾರೀಕರಣಗಳ ಪ್ರಭಾವ ಹಾಗೂ ಇಂಗ್ಲೀಷನ ವ್ಯಾಮೋಹ ಕನ್ನಡವನ್ನು ದುಸ್ಥಿತಿಗೆ ತಂದಿದೆ. ಇಂದು ಕನ್ನಡದ ರಕ್ಷಣೆ ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮನೆಯಲ್ಲಿ ಪ್ರತಿಯೊಬ್ಬರೂ ಕನ್ನಡ ಬಳಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ, ಗ್ರೇಡ್ 2 ತಹಶೀಲ್ದಾರ್ ಗುರುರಾಜ ಸಂಗಾವಿ, ಉಪ ತಹಶೀಲ್ದಾರ್ ಅಣವೀರಪ್ಪ, ಸಿಡಿಪಿಒ ಡಾ. ವಿಜಯಲಕ್ಷ್ಮಿ ಹೇರೂರು, ಪತ್ರಕರ್ತ ಸಂಘದ ಅಧ್ಯಕ್ಷ ರಘುವೀರಸಿಂಗ ಠಾಕೂರ, ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯಲ್ಲಾಲಿಂಗ ಹೈಯ್ಯಾಳಕರ್, ವಿಶ್ವರಾಜ ಫಿರೋಜಾಬಾದ, ಶರಣಗೌಡ ಪಾಟೀಲ,ಪೂಜಪ್ಪ ಮೇತ್ರೆ, ಶರಣು ವಸ್ತ್ರದ್, ರಾಯಪ್ಪ ಹುರಮುಂಜಿ, ಗಿರಿಮಲ್ಲಪ್ಪ ವಳಸಂಗ, ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.