ಕಲಬುರಗಿ | ಕಾರು-ಲಾರಿ ನಡುವೆ ಭೀಕರ ರಸ್ತೆ ಅಪಘಾತ : ದಂಪತಿ ಮೃತ್ಯು
ಕಲಬುರಗಿ : ಕಾರು ಮತ್ತು ಲಾರಿಯ ನಡುವೆ ಪರಸ್ಪರ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ದಂಪತಿಗಳು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಹುಮ್ನಾಬಾದ್ ಮುಖ್ಯ ರಸ್ತೆಯ ಸ್ವಾಮಿ ಸಮರ್ಥ ದೇವಸ್ಥಾನದ ಸಮೀಪ ಗುರುವಾರ ಸಂಜೆ ನಡೆದಿದೆ.
ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಪತಿ-ಪತ್ನಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದಂಪತಿಗಳನ್ನು ಕಲಬರಗಿ ನಗರದ ರೆಹಮತ್ ನಗರದ ನಿವಾಸಿಯಾಗಿರುವ ಮುಹಮದ್ ಶೇಕಿಬ್ ಜಿಲ್ಹಾನಿ (32) ಮತ್ತು ಆತನ ಪತ್ನಿ ಶೇರಿನ್ ಶೆಕಿಬ್ (28) ಎಂದು ಗುರುತಿಸಲಾಗಿದೆ.
ಹುಮನಾಬಾದ್ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಕಾರು, ಕಲಬುರಗಿಯಿಂದ ಹುಮನಾಬಾದ್ ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಈ ಕುರಿತು ಸಂಚಾರಿ ಠಾಣೆ - 2ರಲ್ಲಿ ಪ್ರಕರಣ ದಾಖಲಾಗಿದೆ.
Next Story