ಕಲಬುರಗಿ ಜಿಲ್ಲೆಯ 2.03 ಲಕ್ಷ ರೈತರಿಗೆ 76.94 ಕೋಟಿ ರೂ. ಬೆಳೆ ಪರಿಹಾರ ಜಮೆ

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್
ಕಲಬುರಗಿ: ಪ್ರಸಕ್ತ 2024-25ನೇ ಸಾಲಿನ ಬೆಳೆ ವಿಮೆ ಸ್ಥಳೀಯ ವಿಕೋಪದಡಿ ಜಿಲ್ಲೆಯ ಒಟ್ಟು 2,03,720 ರೈತರಿಗೆ 76.94 ಕೋಟಿ ರೂ. ಪರಿಹಾರ ರೈತರ ಬ್ಯಾಂಕ ಖಾತೆಗಳಿಗೆ ಜಮೆ ಮಾಡಲಾಗಿದ್ದು, ರೈತರು ತಮ್ಮ ಬ್ಯಾಂಕ್ಗಳಿಗೆ ಬೇಟಿ ನೀಡಿ ತಮ್ಮ ಖಾತೆಗೆ ಪರಿಹಾರ ಹಣ ಜಮೆಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಕಳೆದ ಅಗಷ್ಟ ಕೊನೆ ವಾರ ಹಾಗೂ ಸೆಪ್ಟಂಬರ್ ತಿಂಗಳ ಮೊದಲನೆ ವಾರದಲ್ಲಿ ಸುರಿದ ಮಳೆಯಿಂದಾಗಿ ವಿವಿಧ ಬೆಳೆಗಳು ಮತ್ತು ಸೆಪ್ಟಂಬರ್ ಹಾಗೂ ಅಕ್ಟೋಬರ ತಿಂಗಳಿನಲ್ಲಿ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳು ಹಾಗೂ ನವೆಂಬರ್ ತಿಂಗಳಿನಲ್ಲಿ ಮಳೆ ಬಾರದೆ ತೊಗರಿ ಬೆಳೆ ಹಾಳಾದ ಕಾರಷ ರೈತರು ವಿಮೆ ಕಂಪನಿಗೆ ದೂರು ಸಲ್ಲಿಸಿದರು.
ಇದೀಗ ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ. ಇದರ ಹೊರತಾಗಿ ಬಾಕಿ ಉಳಿದ ಅರ್ಹ ರೈತರಿಗೆ ಅಂತಿಮ ಪಾವತಿಯನ್ನು ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ನಿರ್ದರಿಸಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ತೊಗರಿ, ಹೆಸರು, ಉದ್ದು, ಸೋಯಾಬೀನ್ ಹತ್ತಿ ಹಾಗೂ ಇತರೆ ಬೆಳೆಗಳಿಗೆ ಒಟ್ಟಾರೆ ಜಿಲ್ಲೆಯಲ್ಲಿ 2,04,073 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ.