ಸೇಡಂ | ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಕಲಬುರಗಿ : ಸೇಡಂ ಪುರಸಭೆ ವತಿಯಿಂದ 2021-22ನೇ ಸಾಲಿನ ಎಸ್.ಎಫ್.ಸಿ./ ಟಿ.ಎಸ್.ಪಿ. ಯೋಜನೆಯಡಿ ಸೇಡಂ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಪಂಗಡದ ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ (ಎಸೆಸೆಲ್ಸಿ ಯಿಂದ ಸ್ನಾತಕೋತ್ತರ ಓದುತ್ತಿರುವ ಯಾವುದೇ ಹಂತದ (ST) ವಿದ್ಯಾರ್ಥಿಗಳಿಗೆ) ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸೇಡಂ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಎಸ್.ಎಫ್.ಸಿ./ಟಿ.ಎಸ್.ಪಿ. ಪರಿಶಿಷ್ಟ ಪಂಗಡದ ವಿವಿಧ ಹಂತದಲ್ಲಿ (ಎಸೆಸೆಲ್ಸಿ ಯಿಂದ ಸ್ನಾತಕೋತ್ತರ ಪದವಿ ಓದುವ ಯಾವುದೇ ರೀತಿಯ ಪ.ಪಂಗಡದ ವಿದ್ಯಾರ್ಥಿಗಳಿಗೆ) ಸಹಾಯಧನ ನೀಡಲಾಗುತ್ತದೆ. ಸೇಡಂ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಅರ್ಹ ವಿದ್ಯಾರ್ಥಿಗಳು ನಿಗದಿತ ದಾಖಲಾತಿಗಳೊಂದಿಗೆ 2025ರ ಫೆ.18 ರೊಳಗಾಗಿ ಸೇಡಂ ಪುರಸಭೆಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ಜಾತಿ ಮತ್ತು ಆದಾಯ ಪ್ರಮಾಣಪತ್ರ ಪತ್ರ ನಿಗದಿತ ಗುರಿಗಿಂತ ಹೆಚ್ಚು ಅರ್ಜಿಗಳು ಬಂದಲ್ಲಿ ಗರಿಷ್ಟ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸೇಡಂ ಪುರಸಭೆಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.