ಯುವಜನರು ಶಿವಾಜಿ ಮಹಾರಾಜರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಆರ್.ಬಿ. ಜಗದಾಳೆ

ಕಲಬುರಗಿ; ಶಿವಾಜಿ ಮಹಾರಾಜರಂತಹ ರಾಜರಿಲ್ಲ, ಅವರ ದೇಶಭಕ್ತಿ, ರಾಷ್ಟ್ರಪ್ರೇಮ, ಯುದ್ಧನೀತಿ, ಧೈರ್ಯ, ಶೌರ್ಯ ಜಾತ್ಯಾತೀತ ಮನೋಭಾವನೆ ಇತರೇ ರಾಜರಲ್ಲಿ ಕಾಣುವುದು ತೀರ ಕಡಿಮೆ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಅಧ್ಯಕ್ಷ ಆರ್.ಬಿ. ಜಗದಾಳೆ ಹೇಳಿದರು.
ಬುಧುವಾರ ಪ್ರಕಾಶ ಮಾಲ್ ಹತ್ತಿರದಲ್ಲಿರುವ ಮಯಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಪಂಚಾಯತ್ ಕಲಬುರಗಿ ಇವರು ಸಂಯುಕ್ತಾಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡಿಮಾತನಾಡಿ, ಶಿವಾಜಿ ಮಹಾರಾಜರು ಪ್ರಸುತ್ತ ದಿನಗಳಲ್ಲಿ ಹುಟ್ಟು ಹೋರಾಟಗಾರರಾಗಿದ್ದು, ಮಹಾರಾಜರ ಆದರ್ಶ ತತ್ವಗಳನ್ನು ಇಂದಿನ ಯುವ ಜನಾಂಗವೂ ಅಳವಡಿಸಿಕೊಳ್ಳುವ ಅಗತ್ಯವಿದೆಯೆಂದು ಹೇಳಿದರು.
ರಾಜ್ಯ ಕಾನೂನು ಸಲಹೆಗಾರ ಕೆ.ಕೆ.ಎಂ.ಪಿ. ಬೆಂಗಳೂರುಸೂರ್ಯಕಾಂತ ಕದಮ್ಮ ಮಾತನಾಡಿ, ಛತ್ರಪತಿ ಶಿವರಾಜ ಮಹಾರಾಜರ 398 ನೇ ಜಯಂತ್ಯೋತ್ಸವ ಇಡಿದೇಶದಲ್ಲಿ ಆಚರಣೆ ಮಾಡುತ್ತಿದ್ದೇವೆ ಮರಾಠ ಸಮುದಾಯದಲ್ಲಿ ಬಹಳಷ್ಟು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದವರಿದ್ದಾರೆ ಮಹಾನ ವ್ಯಕ್ತಿಯ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಸಮಾಜದ ಜನರನ್ನು ಮುಖ್ಯವಾಹಿನಿಗೆ ತರುವುದರ ಮೂಲಕ ಮರಾಠ ಸಮುದಾಯವರು ಆರ್ಥಿಕವಾಗಿ ಸ್ವವಲಂಬಿಗಳಾಗುವಂತೆ ಮಾಡಬೇಕೆಂದು ತಿಳಿಸಿದರು.
ಯಾವುದೇ ಮೀಸಲಾತಿ ಸೌಲಭ್ಯ ಇಲ್ಲ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ವಸತಿ ನಿಲಯ ಇಲ್ಲವಸತಿ ಶಾಲೆಗಳು ಇರುವುದಿಲ್ಲ ಸರ್ಕಾರ ಇಂತಹ ಸೌಲಭ್ಯಗಳನ್ನು ನಮ್ಮ ಸಮುದಾಯ ಒದಗಿಸಬೇಕೆಂದರು. ಗೌರವ ಅಧ್ಯಕ್ಷ ಡಾ. ದಿನಕರ್ ಮೊರೆ, ಅವರು ಮಾತನಾಡಿ,ಎಲ್ಲ ಜನಾಂಗದವರಿಗೆ ಸಮನ್ವಯ ದೃಷ್ಠಿಯಿಂದ ಕಂಡ ಮಹಾನವ್ಯಕ್ತಿ ಶಿವಾಜಿ ಮಹಾರಾಜರು ಬದಕಲು ಅವಕಾಶ ನೀಡಿದವರು ಅನ್ಯಾಯದ ವಿರುದ್ಧ ಹೋರಾಡಿದ ಮಹಾನ ವ್ಯಕ್ತಿ,ಶಿವಾಜಿ ಮಹಾರಾಜ ಇವತ್ತಿಗೂ ಶ್ರೇಷ್ಠವ್ಯಕ್ತಿ ಎನಿಸಿಕೊಂಡರು ಎಂದರು.
ದುರ್ಗಾ ಪ್ರಸಾದ ಮಹಾರಾಜ ಉಪನ್ಯಾಸ ನೀಡಿ ಆರ್ಶೀವಚನ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆಯ, ಪಂಪಯ್ಯ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ದತ್ತಪ್ಪ ಸಾಗನೂರ, ಮರಾಠಾ ಸಮಾಜದ ಕಾರ್ಯದರ್ಶಿ ರಾಜು ಕಾಕಡೆ, ಖಜಾಂಚಿ ರಮೇಶ, ಶಿವಾಜಿ ಮಹಾರಾಜರ ವೇಷಧಾರಿ ವಿಶಾಲ ಪವಾರ. ಸಮಾಜದ ಮುಖಂಡರಾದ ವೆಂಕಟೇಶ ಮಾನೆ,ಸುರೇಶ, ಸುಭಾಷ ಚೌಧವ, ಕಿಶೋರ ಮಾನಿ, ರಾಜುಪಾಟೀಲ, ಪ್ರತಾಪ ಕಾಕಡೆ ಹಾಗೂ ಮಹಿಳೆಯರು ಇದ್ದರು. ಮೆರವಣಿಗೆಯೂ ಹುಮನ್ನಾಬಾದ ಬೇಸನಿಂದ ತಹಶೀಲ್ ಆಫೀಸ್ನಿಂದ ಮಯಾಮಂದಿರಲ್ಲಿ ಮುಕ್ತಾಯಗೊಂಡಿತು.