ಕಲಬುರಗಿ: ಡಾ.ಅಂಬೇಡ್ಕರ್ - ಸಾಮಾಜಿಕ ನ್ಯಾಯ ಕುರಿತು ವಿಶೇಷ ಉಪನ್ಯಾಸ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ “ಡಾ. ಅಂಬೇಡ್ಕರ್ ಮತ್ತು ಸಾಮಾಜಿಕ ನ್ಯಾಯ” ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಯಿತು.
ವಿಶೇಷ ಉಪನ್ಯಾಸವನ್ನು ದೆಹಲಿಯ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ, ಪ್ರೊ. ವಲೇರಿಯನ್ ರೊಡ್ರಿಗ್ಸ್ ಅವರು ಡಾ, ಅಂಬೇಡ್ಕರ್ ಹಾಗೂ ಸಾಮಾಜಿಕ ನ್ಯಾಯ ಎಂಬ ವಿಷಯದ ಕುರಿತು ಮಾತನಾಡಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಕುರಿತು ವಿವಿಧ ವಿದ್ವಾಂಸರು ನೀಡಿರುವ ಅಭಿಪ್ರಾಯ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಮುಂದುವರೆದು ಮಾತನಾಡುತ್ತ, ಡಾ. ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ ಅಂದರೆ, ಯಾವ ವ್ಯಕ್ತಿಗೆ ಏನು ಅವಶ್ಯಕತೆ ಇದೆಯೋ ಅದನ್ನು ಕೊಡುವುದು ಎಂದು ಹೇಳಿದರು.
ನ್ಯಾಯವು ಸಾರ್ವತ್ರಿಕವಾದದ್ದು, ನ್ಯಾಯವು ನಿರ್ದಿಷ್ಟವಾದದ್ದು ಎಂದು ಹೇಳುತ್ತ, ಡಾ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಕಲ್ಪನೆಯಲ್ಲಿ ‘ವಿಶಿಷ್ಟತೆ ಮತ್ತು ಸಮಾನತೆ’ ಎಂಬ ಅಂಶಗಳು ಬಹಳ ಪ್ರಮುಖವಾಗಿದ್ದವು ಎಂದರು.
ಸಮಾಜವು ಯಾವ ನ್ಯಾಯವನ್ನು ನ್ಯಾಯ ಎಂದು ಗುರುತಿಸುತ್ತದೆಯೋ ಅದೇ ನ್ಯಾಯ ಎಂದು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಸಮಾಜದಲ್ಲಿ ಸಮಾನ ಮೌಲ್ಯಗಳು ಕೊಡುವುದೇ ಸಾಮಾಜಿಕ ನ್ಯಾಯದ ಕಲ್ಪನೆ ಎಂದು ಡಾ. ಅಂಬೇಡ್ಕರ್ ಅವರ ನಂಬಿಕೆಯಾಗಿತ್ತು ಹಾಗೂ ಡಾ. ಅಂಬೇಡ್ಕರ್ ರ ಸಾಮಾಜಿಕ ನ್ಯಾಯವು ಈ ದೇಶದ ಬಹು ಸಂಖ್ಯಾತರ ಶೋಷಿತರ, ದುರ್ಬಲ ವರ್ಗಗಳ ಪರವಾಗಿತ್ತು ಎಂದು ಹೇಳಿದರು.
ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ ಎಂ. ಯಾತನೂರ ಅವರು ಅಧ್ಯಕ್ಷಿಯ ನುಡಿಗಳನ್ನಾಡಿ, ಡಾ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವು ನಾವು ಸಂವಿಧಾನದಲ್ಲಿ ಕಂಡುಕೊಳ್ಳಬಹುದಾಗಿದೆ. ಈ ದೇಶದ ಎಲ್ಲ ವರ್ಗದ ಎಲ್ಲ ಜನರಿಗೂ ಸಾಮಾಜಿಕ ಆರ್ಥಿಕ ರಾಜಕೀಯ ನ್ಯಾಯವನ್ನು ಕೊಡುವಲ್ಲಿ ಡಾ.ಅಂಬೇಡ್ಕರ್ ಜೀವಮಾನವಿಡಿ ಹೊರಾಟ ಮಾಡಿದ್ದರು ಎಂದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಶಾಂತಕುಮಾರ್ ಹೆಬ್ಳಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಿರಿಯ ಪ್ರಾಧ್ಯಾಪಕ, ಸಮಾಜ ವಿಜ್ಷಾನ ನಿಕಾಯದ ಡೀನ್ ಪ್ರೊ.ಗೂರು ಶ್ರೀರಾಮುಲು ವಂದಿಸಿದರು.