ವಿಜಯೀಭವ ಕೃತಿ ಜನಾರ್ಪಣೆ: ಸಾಹಿತ್ಯ ಪ್ರಿಯ ಮನಗಳ ಸಮ್ಮಿಲನ
ಇಂದಿನ ಪೀಳಿಗೆಗೆ ಜೀವನ ಮೌಲ್ಯ ಕಲಿಸಿಕೊಡಬೇಕಾಗಿದೆ: ಸ್ವಾಮಿರಾವ ಕುಲಕರ್ಣಿ
ಕಲಬುರಗಿ: ಇಂದಿನ ಪೀಳಿಗೆ ಜೀವನ ಮೌಲ್ಯಗಳನ್ನು ಕಲಿಸಿ ಕೊಡಬೇಕಾಗಿದೆ. ಮಕ್ಕಳು ಬೊಬೈಲ್ ಬಿಟ್ಟು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ನಮ್ಮ ಕನ್ನಡದ ಪ್ರೀತಿ, ಸಂಸ್ಕೃತಿ ಹಾಗೂ ಮಾನವೀಯತೆ ಸಂಬoಧಗಳನ್ನು ಗಟ್ಟಿಗೊಳಿಸಬೇಕು ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸಾರಥ್ಯಕ್ಕೆ ಮೂರು ವರ್ಷದ ಸಂಭ್ರಮದ ಭಾವ ಸಮ್ಮಿಲನ ಕಾರ್ಯಕ್ರಮದಲ್ಲಿ ಧರ್ಮಣ್ಣ ಎಚ್ ಧನ್ನಿ ಸಂಪಾದಕತ್ವದ ವಿಜಯೀಭವ ಕೃತಿ ಜನಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಮೂರು ವರ್ಷಗಳಲ್ಲಿ ಮಾಡಿರುವ ಕನ್ನಡ ಸೇವೆ ಸ್ಮರಿಸಬೇಕಾಗುತ್ತದೆ. ಅಂಥ ಕಾರ್ಯವೈಖರಿ ತೇಗಲತಿಪ್ಪಿ ಅವರಲ್ಲಿ ಕಾಣುತ್ತೇವೆ ಎಂದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರು ಮಾತನಾಡಿ, ಮೂರು ವರುಷದ ಸಾಧನೆಯ ಹರುಷದ ಪಥವನ್ನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕಲಬುರಗಿ ನೆಲವನ್ನು ಐಕಾನ್ ಆಗಿಸಿದ ಕೀರ್ತಿ ಕಸಾಪ ಜಿಲ್ಲಾಧ್ಯಕ್ಷರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಸಾಂಸ್ಕೃತಿಕ ಬಳಗ ಕಟ್ಟಿಕೊಂಡು ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊoಡು ಜಿಲ್ಲೆಯನ್ನು ಸಾಂಸ್ಕೃತಿಕ ಜಿಲ್ಲೆಯನ್ನಾಗಿಸುವ ಪ್ರಯತ್ನದ ಹಾದಿಯಲ್ಲಿದ್ದೇವೆ ಎಂದರು.
ಮೂರು ವರ್ಷದ ಅವಧಿಯ ಸಾಧನೆ ಹೆಜ್ಜೆಗಳುಳ್ಳ ವಿಜಯೀಭವ ಕೃತಿ ಜನಾರ್ಪಣೆ ಮಾಡಿದ ವೈದ್ಯ ಚಿಂತಕಿ ಡಾ. ಪ್ರತೀಮಾ ಎಸ್ ಕಾಮರೆಡ್ಡಿ, ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸಲು ಗ್ರಂಥಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಪಾಳಾ ಕಟ್ಟಿಮನಿ ಹಿರೇಮಠ ಸಂಸ್ಥಾನದ ಡಾ. ಗುರುಮೂರ್ತಿ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಡಿ.ಎಚ್.ಓ. ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಜಿ ಬಾಳಿ, ಶಕುಂತಲಾ ಪಾಟೀಲ ಜಾವಳಿ, ರಾಜೇಂದ್ರ ಮಾಡಬೂಳ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಗಣೇಶ ಚಿನ್ನಾಕಾರ, ಜಗದೀಶ ಮರಪಳ್ಳಿ, ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ಸುರೇಶ ಲೇಂಗಟಿ. ಡಾ. ನಾಗೇಂದ್ರ ಮಸೂತಿ, ಎ.ಕೆ. ರಾಮೇಶ್ವರ, ಚಂದ್ರಕಾoತ ಸೂರನ್, ಡಾ. ಬಾಬುರಾವ ಸೂರನ್, ರಮೇಶ ಡಿ ಬಡಿಗೇರ, ಪೂಜಾ ಬಂಕಲಗಿ, ಪ್ರಭುಲಿಂಗ ಮೂಲಗೆ, ಶಿವಾನಂದ ಮಠಪತಿ, ಸೈಯದ್ ನಜಿರುದ್ದೀನ್ ಮುತ್ತವಲಿ, ಡಾ. ಗೌಸುದ್ದೀನ್ ತುಮಕೂರಕರ್, ಎಂ ಎಸ್ ಪಾಟೀಲ ನರಿಬೋಳ, ಅಶ್ವಿನಿ ಹಡಪದ, ಡಾ. ಅರುಣಕುಮಾರ ಲಗಶೆಟ್ಟಿ, ಹಣಮಂತ ಪೆಂಚನಪಳ್ಳಿ, ಬಾಬುರಾವ ಪಾಟೀಲ, ರಾಜಶೇಖರ ಚೌದ್ರಿ, ಪಲ್ಲವಿ ಕುಲಕರ್ಣಿ, ಗಣೇಶ ಚಿನ್ನಾಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.