ರಾಜ್ಯ ದ ಬಂದರು ಅಭಿವೃದ್ಧಿಗೆ 1000 ಕೋಟಿ ರೂ ಯೋಜನೆ: ಸಚಿವ ಮಂಕಾಳ ಎಸ್ ವೈದ್ಯ
ಮಂಗಳೂರು: ರಾಜ್ಯದಲ್ಲಿ ಬಂದರು ಗಳ ಅಭಿವೃದ್ಧಿ ಪಡಿಸಲು ಸಾಗರ ಮಾಲ ಯೋಜ ನೆಯ ಮೂಲಕ ರೂ 1000 ಕೋಟಿ ಯೋಜನೆ ರೂಪಿಸಲಾ ಗಿದೆ. ಶೀಘ್ರದಲ್ಲೇ ಈ ಯೋಜನೆ ಅನುಷ್ಠಾನ ಗೊಳಿಸಲಾಗುವುದು ಎಂದು ರಾಜ್ಯ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ತಿಳಿಸಿದ್ದಾರೆ.
ಅವರು ಇಂದು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ ವತಿಯಿಂದ ಕರ್ನಾಟಕದ ಬಂದರುಗಳಿಗೆ ಸಂಬಂಧಿ ಸಿದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೇಂದ್ರ ಸರಕಾರದ ಶೇ 50 ಮತ್ತು ರಾಜ್ಯ ಸರಕಾರ ಶೇ 50 ಅನುದಾನದೊಂದಿಗೆ 26 ಯೋಜನೆ ಗಳು ಸಾಗರ ಮಾಲಾದ ಮೂಲಕ ಕಾರ್ಯಗತಗೊಳ್ಳಲಿದೆ. ಈ ಯೋಜನೆ 2015ರಲ್ಲೇ ಆರಂಭವಾಗ ಬೇಕಿತ್ತು. ಈಗಾಗಲೇ ವಿಳಂಬವಾಗಿರುವ ಕಾರಣ ಇಲ್ಲಿ ಹೂಡಿಕೆ ದಾರರಿಗೂ ತೊಂದರೆ ಯಾಗಿದೆ. ಈ ಹಿನ್ನೆಲೆಯಲ್ಲಿ ಸಿಆರ್ ಜೆಡ್ ನಿಯಮಗಳು ಅಭಿವೃದ್ಧಿಗೆ ತೊಂದರೆ ಆಗದ ರೀತಿಯಲ್ಲಿ ಸರಿಪಡಿಸಿ ಶೀಘ್ರದಲ್ಲೇ ಯೋಜನೆ ಅನು ಷ್ಠಾನ ಗೊಳಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿ ಗಳು ಸಹಕಾರ ನೀಡುತ್ತಿದ್ದಾರೆ ಎಂದು ಸಚಿವ ಮಂಕಾಳ ಎಸ್ ವೈದ್ಯ ತಿಳಿಸಿದ್ದಾರೆ.
*ಅಂಕೋಲ -ಹುಬ್ಬಳ್ಳಿ ರೈಲು ಮಾರ್ಗ ಅಭಿವೃದ್ಧಿ ಗೆ 6000 ಕೋಟಿ ರೂ:- ಅಂಕೋಲ -ಹುಬ್ಬಳ್ಳಿ ರೈಲು ಮಾರ್ಗ ಅಭಿವೃದ್ಧಿಗೆ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 6000 ಕೋಟಿ ರೂಪಾಯಿ ವಿನಿಯೋಗಿಸಲು ನಿರ್ಧರಿಸಿದೆ. ಹೊನ್ನಾವರದ ಪಾವಿನ ಕುರ್ವೆ ,ಮಂಕಿ ಬಂದರುಗಳ ಅಭಿವೃದ್ಧಿಗೆ ಸರಕಾರ ಕ್ರಮ ಕೈಗೊಳ್ಳಲಿದೆ.
*10,500 ಕೋಟಿ ಹೂಡಿಕೆ ಮಾಡಲು ಹೂಡಿಕೆ ದಾರರಿದ್ದಾರೆ:- ರಾಜ್ಯದ ಲ್ಲಿ 350 ಕಿ.ಮೀ ಕರಾವಳಿ ತೀರದಲ್ಲಿ ಮೀನುಗಾರಿಕೆ, ಪ್ರವಾಸೋದ್ಯಮ, ಬಂದರುಗಳ ಅಭಿವೃದ್ಧಿ ಗೆ ಸುಮಾರು 10,500 ಕೋಟಿ ರೂ ಗಳನ್ನು ಹೂಡಿಕೆ ಮಾಡಲು ಹೂಡಿಕೆ ದಾರರು ಮುಂದೆ ಬಂದಿದ್ದಾರೆ. ಇಲ್ಲಿನ ಜನರಿಗೆ ತೊಂದರೆಯಾಗದಂತೆ ಮತ್ತು ಹೆಚ್ಚು ಅನುಕೂಲವಾಗುವ ಯೋಜನೆ ಗಳನ್ನು ಅನುಷ್ಠಾನ ಗೊಳಿಸಲು ಸಾಮಾನ್ಯ ಮೀನುಗಾರರಿಗೆ ನೆರವಾಗುವ ಯೋಜನೆ ಅನುಷ್ಠಾನ ಗೊಳಿಸಿ ಅವರಿಗೆ ನೆರವು ಸರಕಾರ ಸದಾ ಸಿದ್ಧವಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಯೋಜನೆಯೊಂದನ್ನು ರೂಪಿಸಬೇಕು ಎಂದು ತಿಳಿಸಿದರು.
*ಕಾಮಗಾರಿ ವಿಳಂಬವಾದರೆ ಬ್ಲಾಕ್ ಲೀಸ್ಟ್ ಗೆ ಸೇರ್ಪಡೆ :- ಒಪ್ಪಂದದ ಪ್ರಕಾರ ಕಾಮಗಾರಿ ಯನ್ನು ಕ್ಲಪ್ತ ಸಮಯದಲ್ಲಿ ಪೂರ್ಣ ಗೊಳಿಸದಿರುವ ಗುತ್ತಿಗೆದಾರರು ಮತ್ತು ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈ ಗೊಳ್ಳಲಾಗುವುದು. ಕಾಮಗಾರಿ ಯಲ್ಲಿ ವಿಳಂಬ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸಚಿವ ಮಂಕಾಳ ಎಸ್ ವೈದ್ಯ ತಿಳಿಸಿದ್ದಾರೆ.
ಸಭೆಯಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರದ ಉಪಾಧ್ಯಕ್ಷ ಕೆ.ಜಿ.ನಾಥ್, ಸಿಐಐ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕಲ್ಬಾವಿ, ಉಪಾಧ್ಯಕ್ಷ ಅಜಿತ್ ಕಾಮತ್ ಉಪಸ್ಥಿತರಿದ್ದರು.