ಜೂ.21-22: ಉಡುಪಿ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ
ಮಾರ್ಗ ನಿರ್ವಹಣಾ ಕಾಮಗಾರಿ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣ ದಿಂದ ಜೂ.21 ಮತ್ತು 22 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ ಶಿವಪುರ, ಚಾರ, ಮುದ್ರಾಡಿ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಚಾರ, ಹೊಸೂರು, ಶಿವಪುರ, ಕೆರೆಬೆಟ್ಟು, ಸರಕಾರಿ ಆಸ್ಪತ್ರೆ ಬಳಿ, ಮುದ್ರಾಡಿ, ಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಕನ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂ.21ರಂದು ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ ವಿ.ಪಿ.ನಗರ ಮತ್ತು ವಿ.ಆರ್.ನಗರ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿ ರುವುದರಿಂದ ಸಿಂಡಿಕೇಟ್ ಸರ್ಕಲ್, ಎಂ.ಜಿ.ಸಿ ಸ್ಕೂಲ್, ಬಿ.ಎಸ್.ಎನ್.ಎಲ್, ಟೆಲಿಫೋನ್ ಎಕ್ಸ್‌ಚೇಂಜ್, ವಿದ್ಯಾರತ್ನ ನಗರ, ಡಿ.ಸಿ.ಆಫೀಸ್, ಆರ್.ಟಿ.ಓ ಆಫೀಸ್, ಪೆರಂಪಳ್ಳಿ, ಸಗ್ರಿ ನೋಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂ.21ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಂದಿಕೂರು ವಿದ್ಯುತ್ ಉಪಕೇಂದ್ರದಲ್ಲಿ ಕೇಮಾರ್ ಬೇ, ಮುಲ್ಕಿ ಬೇ, ಬೆಳ್ಮಣ್ ಬೇ, ಪರಿವರ್ತಕ-1 ಮತ್ತು 2 ಬೇ, ಪಿಟಿ ಬೇ ಮತ್ತು ಎಲ್ಲಾ 11ಕೆ.ವಿ ಉಪಕರಣಗಳ ನಿರ್ವಹಣೆ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ನಂದಿಕೂರು ಎಂ.ಯು.ಎಸ್.ಎಸ್‌ನಲ್ಲಿ ಹೊರಡುವ ಎಲ್ಲಾ 11ಕೆ.ವಿ ಫೀಡರ್ ಗಳಲ್ಲಿ ಜೂ.22ರಂದು ಬೆಳಿಗ್ಗೆ 10ಗಂಟೆಯಿಂ ಸಂಜೆ 4 ರವರೆಗೆ ಎರ್ಮಾಳು, ತೆಂಕ, ಪೂಂದಾಡು, ಅದಮಾರು, ಬಡಾಯಾಶ್‌ಟೆಕ್ ಪ್ರೈ ಲಿ, ಹೆಜಮಾಡಿ, ಅವರಾಲು, ಇಂಡಸ್ಟ್ರಿಯಲ್ ಲೇಔಟ್, ಪಲಿಮಾರು, ಸಾಂತೂರು, ನಂದಿ ಕೂರು, ಎನ್.ಎಸ್‌ರೋಡ್, ಇನ್ನಾ ಅಡ್ವೆ, ನಡ್ಸಾಲು, ಪಡುಬಿದ್ರೆ, ಎಸ್.ಎಸ್. ರೋಡ್, ಡೌನ್‌ಟೌನ್, ಬರ್ಪಾಣಿ, ಪಣಿಯೂರು, ಎಲ್ಲೂರು, ಕುಂಜಾನು ಗುಡ್ಡೆ, ಗುರುಗುಂಡಿ, ಕುತ್ಯಾರು, ಕಿನ್ನಿಗೋಳಿ ವಾಟರ್‌ಸಪ್ಲೈ, ಬ್ರೈಟ್ ಫ್ಲ್ಲೆಕ್ಸಿ ಇಂಡಸ್ಟ್ರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.