ಜು.3ರವರೆಗೆ ದ.ಕ.ಜಿಲ್ಲೆಯಲ್ಲಿ ಎಲ್ಲೊ ಅಲರ್ಟ್: ಹವಾಮಾನ ಇಲಾಖೆ
ಫೈಲ್ ಫೋಟೊ
ಮಂಗಳೂರು, ಜೂ.30: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಬಿಸಿಲು ಮತ್ತು ಮೋಡಕವಿದ ವಾತಾವರಣದೊಂದಿಗೆ ಉತ್ತಮ ಮಳೆಯಾಗಿದೆ. ನಗರ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಶುಕ್ರವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೋಡ ಹಾಗೂ ಬಿಸಿಲಿನ ವಾತಾವರಣವಿತ್ತು. ಮಳೆ ಚುರುಕಾಗುತ್ತಲೇ ಕೃಷಿ ಚಟುವಟಿಕೆಗಳು ಕೂಡ ಗರಿಗೆದರಿವೆ.
ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆಯು ಜು.1ರಂದು ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಿವೆ. ಜು.3ರವರೆಗೆ ಎಲ್ಲೊ ಅಲರ್ಟ್ ಮತ್ತು ಜು.4, 5ರಂದು ಆರೆಂಜ್ ಅಲರ್ಟ್ ಘೋಷಿಸಿದೆ.
ದ.ಕ.ಜಿಲ್ಲೆಯಲ್ಲಿ ಸರಾಸರಿ 14.5 ಮಿ.ಮೀ. ಮಳೆಯಾಗಿದೆ. ಶುಕ್ರವಾರ ಬೆಳಗ್ಗಿನವರೆಗೆ ಪುತ್ತೂರಿನಲ್ಲಿ ಗರಿಷ್ಠ 22 ಮಿಮೀ ಮಳೆ ದಾಖಲಾಗಿದೆ. ಬೆಳ್ತಂಗಡಿ 9.6 ಮಿಮೀ, ಬಂಟ್ವಾಳ 17.3 ಮಿಮೀ, ಮಂಗಳೂರು 19.3 ಮಿಮೀ, ಸುಳ್ಯ 12.4 ಮಿಮೀ, ಮೂಡುಬಿದಿರೆ 11.8 ಮಿಮೀ, ಕಡಬ 15.9 ಮಿಮೀ ಮಳೆಯಾಗಿದೆ.
Next Story