ಬಜ್ಪೆ: ಪಟ್ಟಣ ಪಂಚಾಯತ್ ವ್ಯಾಪ್ತಿಯ ರಸ್ತೆಯ ಕಳಪೆ ಕಾಮಗಾರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು
ಬಜ್ಪೆ, ಜು. 8: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಜ್ಪೆ ಪೇಟೆಯ ಮುಖ್ಯ ರಸ್ತೆ ಅಗಲೀಕರಣದ ಕಾಮಗಾರಿಯ ಅವ್ಯವಸ್ಥೆ ಮತ್ತು PWD ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ದೂರು ಸಲ್ಲಿಸಲಾಯಿತು.
ಈ ವೇಳೆ ಸಚಿವರೊಂದಿಗೆ ಮತನಾಡಿದ ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತರಾದ ಸಿರಾಜ್ ಬಜ್ಪೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಪ ಮಾಜಿ ಸದಸ್ಯ ಐವನ್ ಡಿಸೋಜಾ ಅವರ ನಿಯೋಗ ರಸ್ತೆಯ ಕಳಪೆ ಕಾಮಗಾರಿಯ ಬಗ್ಗೆ ಸವಿಸ್ತಾರವಾಗಿ ಮನವರಿಕೆ ಮಾಡಿತು. ಜೊತೆಗೆ, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಐಟಿ ಸೆಲ್ ಅಧ್ಯಕ್ಷರಾದ ಅಲೆಸ್ಟರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿಶಾಲ್, ರಾಜ್ಯ ಅಲ್ಪಸಂಖ್ಯಾತ ನಾಯಕರಾದ ಹಬೀಬ್ ಕಣ್ಣೂರು ,ಮಾಜಿ ಕರಾವಳಿ ಅಭಿವೃದ್ಧಿ ನಿಗಮದ ಸದಸ್ಯರಾದ ಪಿಯುಸ್ ಮೊಂತೆರೊ,ಮುಲ್ಕಿ- ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ ಮತ್ತು ಬಜ್ಪೆಯ ನಾಗರಿಕರು ಉಪಸ್ಥಿತರಿದ್ದರು.