ಬಕ್ರೀದ್ | ಉಳ್ಳಾಲ ದರ್ಗಾಕ್ಕೆ ಸ್ಪೀಕರ್ ಯುಟಿ ಖಾದರ್ ಭೇಟಿ
ಉಳ್ಳಾಲ: 'ಬಕ್ರೀದ್ ಸೌಹಾರ್ದ ಸಂದೇಶ ಸಾರುತ್ತದೆ. ಈ ಹಬ್ಬ ಆಚರಿಸುವ ಜೊತೆಗೆ ಸಹೋದರತೆ ಯನ್ನು ಬೆಳೆಸಬೇಕು. ಪರಸ್ಪರ ಸಂಸ್ಕೃತಿ, ಸೌಹಾರ್ದ ತೆಯನ್ನು ಹಂಚುವ ಮೂಲಕ ದೇಶದ ಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು' ಎಂದು ವಿಧಾನ ಸಭಾ ಅಧ್ಯಕ್ಷ ಯುಟಿ ಖಾದರ್ ಹೇಳಿದ್ದಾರೆ.
ಅವರು ಬಕ್ರೀದ್ ಹಬ್ಬದ ಹಿನ್ನೆಲೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್ ನಡೆಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಪ್ರವಾದಿ ಇಬ್ರಾಹಿಂ ಅವರ ಕಾಲದಲ್ಲಿ ನಡೆದ ಘಟನೆ ಯನ್ನು ನೆನಪಿಸುವಂತಹ ಹಬ್ಬ ಬಕ್ರೀದ್ ಆಗಿದೆ.ಈ ಹಬ್ಬ ಎಲ್ಲರಿಗೂ ನೆಮ್ಮದಿ ತರಲಿ ಎಂಬ ಹಾರೈಕೆ ನಮ್ಮದು. ಪ್ರವಾದಿ ಇಬ್ರಾಹಿಂ, ಪ್ರವಾದಿ ಇಸ್ಮಾಯಿಲ್ ಅವರ ಆದರ್ಶವನ್ನು ಲೋಕದ ಮುಸ್ಲಿಮರು ಪಾಲಿಸುತ್ತಾ ಬರುತ್ತಾರೆ. ಅವರ ಪುಣ್ಯ ದಿಂದ ಮಣಿಪುರದ ಜನಾಂಗೀಯ ಕಲಹ ಇತ್ಯರ್ಥ ಗೊಳ್ಳಲಿ, ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್ ಮುಕಚೇರಿ, ಸಮಿತಿ ಸದಸ್ಯರಾದ ಝೈನಾಕ ಮೇಲಂಗಡಿ,ತಂಝೀಲ್ ಮುಕಚೇರಿ, ಉಪಸ್ಥಿತರಿದ್ದರು.