ಬೆಳ್ಳಾರೆ: ಬಾವಿ ನೀರಲ್ಲಿ ಪೆಟ್ರೋಲ್ ವಾಸನೆ; ಅಧಿಕಾರಿಗಳಿಂದ ಪರಿಶೀಲನೆ
ಸುಳ್ಯ: ಬೆಳ್ಳಾರೆ ಸಮೀಪದ ಪಂಜಿಗಾರು ಎಂಬಲ್ಲಿ ಬಾವಿಯೊಂದರ ನೀರಿನಲ್ಲಿ ಪೆಟ್ರೋಲ್ ವಾಸನೆ ಬರುತ್ತಿದ್ದು, ಬಾವಿಯ ಮೇಲಿನಿಂದ ನೋಡಿದಾಗ ನೀರು ತೈಲದಂತೆ ಕಾಣಿಸುತ್ತಿರುವ ಘಟನೆ ನಡೆದಿದೆ.
ಕಳಂಜ ಗ್ರಾಮದ ಪಂಜಿಗಾರು ದಯಾನಂದ ಗೌಡ ಎಂಬವರ ಬಾವಿ ನೀರು ಜು. 8ರಿಂದ ಪೆಟ್ರೋಲ್ ವಾಸನೆ ಬರುತ್ತಿತ್ತು. ಬಾವಿಯನ್ನು ಪರಿಶೀಲಿಸಿದಾಗ ನೀರಿನಲ್ಲಿ ತೈಲ ಬೆರಕೆಯಾದಂತೆ ಕಂಡುಬರುತ್ತಿತ್ತು.
ಈ ಕುರಿತಂತೆ ಗ್ರಾಮ ಪಂಚಾಯತ್ಗೆ ದೂರು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷೆ ನಡೆಸಿ ನೀರಿನಲ್ಲಿ ಕ್ಲೋರೈಡ್ ಅಂಶ ಕಡಿಮೆ ಇದ್ದು ಅದು ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಿದ್ದಾರೆ.
Next Story