ಪರ್ಕಳದಲ್ಲಿ ದೊಂದಿ ಬೆಳಕಿನಲ್ಲಿ ಕಪ್ಪು ಏಡಿ ಬೇಟೆ
ಉಡುಪಿ, ಜು.೨: ಮಳೆಗಾಲ ಬಂದ ತಕ್ಷಣ ಕರಾವಳಿಯಲ್ಲಿ ದೊಂದಿ ಬೆಳಕಿನಲ್ಲಿ ಉಬ್ಬರ್ ಮೀನಿನ ಬೇಟೆಯ ಭರಾಟೆ ಜೋರಾಗಿರುತ್ತದೆ. ಹರಿಯುವ ತೋಡಿನಲ್ಲಿ ಏಡಿ ಸೇರಿದಂತೆ ವಿವಿಧ ಜಾತಿಯ ಮೀನುಗಳು ಹಿಡಿಯುವ ಪದ್ಧತಿ ಈಗಲೂ ಹೆಚ್ಚಿನ ಕಡೆಗಳಲ್ಲಿ ಮುಂದುವರೆದಿದೆ.
ಪರ್ಕಳದ ಕೆಳ ಪರ್ಕಳದ ಶ್ರೀಗೋಪಾಲ ಕೃಷ್ಣ ದೇವಾಲಯದ ಮುಂಭಾಗ ದಲ್ಲಿ ಮಳೆಗಾಲದಲ್ಲಿ ಹರಿಯುವ ರಾಜಾ ಕಾಲುವೆಯಲ್ಲಿ ಈ ಬಾರಿ ಉಬ್ಬರ್ ಮೀನ ಬೇಟೆಯಲ್ಲಿ ಯಥೇಚ್ಛವಾಗಿ ಕಪ್ಪುಏಡಿ ದೊರೆತಿದೆ. ಸ್ಥಳೀಯರಾದ ಮಹೇಶ್ ಕುಲಾಲ್ ನೇತೃತ್ವದಲ್ಲಿ ತಂಡಕ್ಕೆ ಈ ಬಾರಿಯ ಮಳೆಗಾಲದ ಉಬ್ಬರ್ ಮೀನಿನ ಬೇಟೆಯಲ್ಲಿ ಹೆಚ್ಚಾಗಿ ಏಡಿ ಸಿಕ್ಕಿರುವುದು ಕಂಡುಬಂದಿದೆ.
ಮಳೆಗಾಲದಲ್ಲಿ ಹೊಸ ನೀರಿನಲ್ಲಿ ಮೀನಿನ ಬೇಟೆಯಾಡುವ ಪದ್ಧತಿಯನ್ನು ಇವರು ರೂಡಿಸಿಕೊಂಡಿದ್ದಾರೆ. ಈ ತಂಡದಲ್ಲಿ ಪ್ರಕಾಶ್ ಕುಲಾಲ್, ದಿನೇಶ್ ಕುಲಾಲ್, ಮನೀಶ್ ಕುಲಾಲ್ ಇದ್ದಾರೆ. ನಂತರ ಇವರು ಮನೆಯಲ್ಲಿ ಮಳೆಗಾಲದ ಕಪ್ಪುಏಡಿಯ ಸುಕ್ಕದ ಸವಿರುಚಿಯನ್ನು ಪಡೆದರು
Next Story