ಮಂಗಳೂರು: ಜೂಜಾಟದ ಅಡ್ಡೆಗೆ ದಾಳಿ; 11 ಮಂದಿ ಸೆರೆ
ಸಿಸಿಬಿ ಕಾರ್ಯಾಚರಣೆ
ಮಂಗಳೂರು, ಜೂ.17: ಮಂಗಳೂರು ನಗರದ ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿ ಮೀನಕಳಿಯ ರೈಲ್ವೆ ಟ್ರಾಕ್ ಬಳಿ ಜೂಜಾಟದ ಅಡ್ಡೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ 11 ಮಂದಿಯನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಮಂಗಳೂರು ನಗರದ ಬೈಕಂಪಾಡಿಯ ಮೀನಕಳಿಯದ ರೈಲ್ವೆ ಟ್ರಾಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದರು ಎಂದು ತಿಳಿದು ಬಂದಿದೆ.
ಚೊಕ್ಕಬೆಟ್ಟುವಿನ ಮೊಹಮ್ಮದ್ ಹನೀಫ್(36), ಪಣಂಬೂರಿನ ಅನಿಲ್ ಕುಮಾರ್(40), ಬಿಜೈನ ರಾಮಣ್ಣ ಕವಡಿಮಟ್ಟಿ(31), ಬಿಜೈನ ರಾಮಪ್ಪ ಲಮಾಣಿ(38), ಕುಳಾಯಿಯ ಮನೋಹರ್(53), ಮೀನಕಳಿಯ ನಾಗರಾಜ(42), ಕುಳಾಯಿ ಸತೀಶ್ (36), ಕಲ್ಲಾಪುವಿನ ಹಸೈನಾರ್ (55), ಕುಂಜತ್ತಬೈಲ್‌ನ ಟಿ.ಎಂ. ಮರಿಯಪ್ಪ(41), ಮೀನಕಳಿಯ ಮುರ್ತುಜಾ ಚಕಣಿ(38), ಕಾಟಿಪಳ್ಳದ ಶಶಿ ದೇವಾಡಿಗ(52) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಅಂದರ್ - ಬಾಹರ್ ಆಟಕ್ಕೆ ಉಪಯೋಗಿಸಿದ ನಗದು ಹಣ ರೂ. 14,420, ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 14,870 ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.