ಕ್ಯಾಟರಿಂಗ್‌ಗೆ ವಸ್ತುಗಳನ್ನು ನೀಡುವುದಾಗಿ ನಂಬಿಸಿ ವಂಚನೆ: ದೂರು ದಾಖಲು
ಮಂಗಳೂರು, ಜು.14: ಕ್ಯಾಟರಿಂಗ್ ವ್ಯವಹಾರಕ್ಕೆ ಬೇಕಾಗುವ ವಸ್ತುಗಳನ್ನು ನೀಡುವುದಾಗಿ ನಂಬಿಸಿ 1.16 ಲಕ್ಷ ರೂ. ವಂಚಿಸಿರುವ ಘಟನೆ ವರದಿಯಾಗಿದೆ.
ಈ ಸಂಬಂಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜು.15ರಂದು ದೂರುದಾರರ ಆ್ಯಪ್‌ನಲ್ಲಿ ಕ್ಯಾಟರಿಂಗ್ ವ್ಯವಹಾರಕ್ಕೆ ಬೇಕಾದ ವಸ್ತುಗಳನ್ನು ನೋಡಿ ಫೇಸ್‌ಬುಕ್ ಖಾತೆದಾರರೊಂದಿಗೆ ಚಾಟಿಂಗ್ ಮಾಡಿದ್ದರು ಎನ್ನಲಾಗಿದೆ. ಆಗ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡುವುದಾಗಿ ಚಾಟಿಂಗ್ ನಡೆಸಿದ ಅಪರಿಚಿತ ಫೇಸ್‌ಬುಕ್ ಲಿಂಕ್‌ವೊಂದನ್ನು ಕಳುಹಿಸಿ ಅದರಲ್ಲಿ ಮಾಹಿತಿಯನ್ನು ನೀಡುವಂತೆ ತಿಳಿಸಿದ ಎಂದು ತಿಳಿದು ಬಂದಿದೆ. ಅದರಂತೆ ದೂರುದಾರರು ಅವರ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದ್ದರು. ಬಳಿಕ ಅವರ ಕ್ರೆಡಿಟ್ ಕಾರ್ಡ್ ಖಾತೆಯಿಂದ ಹಂತ ಹಂತವಾಗಿ 1.16 ಲ.ರೂ. ವರ್ಗಾಯಿಸಿ ವಂಚಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
Next Story