ವಿದ್ಯುತ್ ಆಘಾತ: ಕಾರ್ಮಿಕ ಮೃತ್ಯು
ಹಿರಿಯಡ್ಕ, ಜು.5: ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕ ರೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಜು.4ರಂದು ಬೊಮ್ಮಾರ ಬೆಟ್ಟು ಗ್ರಾಮದ ಗುಡ್ಡೆಯಂಗಡಿ ಪೆಲತ್ತೂರು ಎಂಬಲ್ಲಿ ನಡೆದಿದೆ.
ಮೃತರನ್ನು ಅಜೆಕಾರಿನ ಸತೀಶ ಶೆಟ್ಟಿ(43) ಎಂದು ಗುರುತಿಸಲಾಗಿದೆ. ಇವರು ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದಾಗ ತಲೆ ಎಲ್ಟಿ ಲೈನ್ ಮೇಲೆ ಇರುವ ಹೈ ಟೆನ್ಷನ್ ತಂತಿಗೆ ತಾಗಿದ್ದು, ಇದರಿಂದ ವಿದ್ಯುತ್ ಆಘಾತ ದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಅವಘಡಕ್ಕೆ ಗುತ್ತಿಗೆದಾರ ಶಂಕರ್ ನಾಯ್ಕ ಮತ್ತು ಮುಖ್ಯ ಗುತ್ತಿಗೆದಾರ ಸದಾಶಿವ ಅವರ ನಿರ್ಲಕ್ಷ್ಯವೇ ಕಾರಣ ಎಂದು ದೂರಲಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story