ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡಿ: ಡಾ.ಬಲ್ಲಾಳ್
ಸಿಬಿಎಸ್‌ಇ, ಐಸಿಎಲ್ ಶಾಲಾ ಒಕ್ಕೂಟದ ಸಭೆ
ಉಡುಪಿ, ಜೂ.೩೦: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಐಸಿಎಲ್ ಹಾಗೂ ಸಿಬಿಎಸ್‌ಇ ಶಾಲಾ ಪ್ರಾಂಶುಪಾಲರ ಒಕ್ಕೂಟದ ಸಭೆ ಮಣಿಪಾಲದ ಮಾಧವಕೃಪಾ ಶಾಲಾ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಅಧ್ಯಕ್ಷ ಹಾಗೂ ಮಾಹೆ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಎಗೆ ಹೆಚ್ಚಿನ ಒತ್ತೂ ನೀಡಿದಾಗ ಶಾಲೆಗಳು ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಜಗತ್ತಿನಲ್ಲೇ ಅತ್ಯಧಿಕ ಜನಸಂಖ್ಯೆಯ ಯುವ ಸಮೂಹವನ್ನು ಹೊಂದಿರುವ ನಾವು ಅಭಿವೃದ್ಧಿಶೀಲ ದೇಶಗಳ ಪಟ್ಟಿಯಿಂದ ಹೊರಬಂದು ಅಭಿವೃದ್ಧಿ ಹೊಂದಿದ ದೇಶವಾಗುವಲ್ಲಿ ನೂತನ ಶಿಕ್ಷಣ ನೀತಿಯು ಪೂರಕವಾಗಲಿದೆ ಎಂದು ಹೇಳಿದರು.
ಎಐಸಿಎಸ್‌ನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರವೂ ಇದೇ ಸಂದರ್ಭದಲ್ಲಿ ನೆರವೇರಿತು. ಒಕ್ಕೂಟದ ನಿರ್ಗಮನ ಅಧ್ಯಕ್ಷ ಲಾರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲರಾದ ವಂ.ರಾಬರ್ಟ್ ಡಿಸೋಜ, ಕಾರ್ಯದರ್ಶಿ ಮಣಿಪಾಲ ಸ್ಕೂಲ್‌ನ ಪ್ರಾಂಶುಪಾಲರಾದ ಅನುರಾಧ ಶಿವರಾಮ್, ಕೋಶಾಧಿಕಾರಿ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ಪ್ರಾಂಶು ಪಾಲರಾದ ಡಾ.ಜಾನ್ ಅಬ್ರಹಾಂ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಒಕ್ಕೂಟದ ನೂತನ ಅಧ್ಯಕ್ಷರಾಗಿ ಧರ್ಮಸ್ಥಳ ಮಂಜುನಾಥೇಶ್ವರ ಆ್ಂಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಮನಮೋಹನ್ ನಾಯಕ್ ಕೆ.ಜಿ., ಕಾರ್ಯದರ್ಶಿ ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಗೀತಾ ಎಸ್. ಕೋಟ್ಯಾನ್ ಹಾಗೂ ಕೋಶಾಧಿಕಾರಿ ಸೈಂಟ್ ಅಲಾಸಿಯಸ್ ಗೋಂಝಾಗಾ ಸ್ಕೂಲನ ಪ್ರಾಂಶುಪಾಲ ವಂ.ಮೆಲ್ವಿನ್ ಅನಿಲ್ ಲೋಬೊ ಅಧಿಕಾರ ಸ್ವೀಕರಿಸಿದರು.
ಮಾಧವಕೃಪಾ ಶಾಲೆಯ ಪ್ರಾಂಶುಪಾಲರಾದ ಜೆಸ್ಸಿ ಆಂಡ್ರ್ಯೂ ಸ್ವಾಗತಿಸಿದರೆ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲೆ ದೇಚಮ್ಮ ತೇಲಪಂಡ ಮಾದಪ್ಪ ವಂದಿಸಿದರು. ಮಾಧವಕೃಪಾದ ಆಪ್ತ ಸಮಾಲೋಚಕಿ ದೀಪಾಲಿ ಮುಖ್ಯೋಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.