ಕೀಳಂಜೆ ಕಾಡುಕೋಣ ಹಾವಳಿ ಪ್ರದೇಶಕ್ಕೆ ಅರಣ್ಯ ಅಧಿಕಾರಿಗಳ ಭೇಟಿ
ಉಡುಪಿ, ಜು.16: ಕಾಡುಕೋಣ ದಾಳಿ ಮಾಡಿ ಕೃಷಿ ಬೆಳೆ ಹಾನಿಗೈದ ಹಾವಂಜೆ ಗ್ರಾಮದ ಕೀಳಂಜೆ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಟಿ ಮಾಡಿದ ಗದ್ದೆಗಳಿಗೆ ಮೂರು ನಾಲ್ಕು ಕಾಡುಕೋಣಗಳು ರಾತ್ರಿಯ ವೇಳೆಯಲ್ಲಿ ದಾಳಿ ನಡೆಸಿ, ನಾಟಿ ಮಾಡಿದ ಗದ್ದೆಗಳ ಪೈರನ್ನ ತಿಂದು ಹಾಳು ಗೆಡವಿತ್ತು. ಈ ಹಿನ್ನೆಲೆಯಲ್ಲಿ ಪ್ರದೇಶಕ್ಕೆ ಬ್ರಹ್ಮಾವರದ ಉಪ ವಲಯ ಅರಣ್ಯ ಇಲಾಖಾಧಿಕಾರಿ ಹರೀಶ್, ವನರಕ್ಷಕ ರಮೇಶ್ ಕೆ. ಭೇಟಿ ನೀಡಿದರು. ರಾತ್ರಿ ವೇಳೆ ಕಾಡುಕೋಣಗಳು ಗದ್ದೆಗಳಿಗೆ ಬಾರದಂತೆ ಮುನ್ನೆಚ್ಚರಿಕೆಯಾಗಿ ಗರ್ನ್ನಾಲ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಕಾಂಗ್ರೆಸ್ ಮುಖಂಡ ಜಯ ಶೆಟ್ಟಿ ಬನ್ನಂಜೆ, ದಾದು ಪೂಜಾರಿ ಕುಟ್ಟಿ ಪೂಜಾರಿ, ಅಶೋಕ್ ಪೂಜಾರಿ ಪದ್ಮನಾಭ ಆಚಾರಿ, ಶಶಿ ಪೂಜಾರಿ ಸುಧಾಕರ ಪೂಜಾರಿ, ಋಣಾಕರ ಪೂಜಾರ, ಕರುಣಾಕರ ಪೂಜಾರಿ, ಸಂತೋಷ ಪೂಜಾರಿ ಪ್ರಸಾದ್, ಸಾಧು ಪೂಜಾರಿ, ಮೊದಲಾದವರು ಜೊತೆಗಿದ್ದರು.
Next Story